ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಮನೆ ಕೊಡುಗೆ

Lionel Pinto Kinnigoli

ಕಿನ್ನಿಗೋಳಿ ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಉಚಿತವಾಗಿ ಬಡ ಕುಟುಂಬಕ್ಕೆ ನಿವೇಶನ ಹಾಗೂ ಮನೆಯನ್ನು ನೀಡಿತು.
ಜೊರೋಮ್ ಮತ್ತು ಅನ್ನಾ ಮರಿಯ ಡಿ’ಸೋಜ ದಂಪತಿಗಳು ಫಲಾನುಭಾವಿ ಎವುಜಿನ್ ಪಿಂಟೋ ಅವರಿಗೆ ನಿವೇಶನ ದಾನವಾಗಿ ನೀಡಿದರು. ಸೊಸೈಟಿಯ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಮನೆ ಕಟ್ಟಿ ಕೊಡಲಾಗುವುದು
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಅಲ್ಫ್ರೆಡ್ ಜೆ. ಪಿಂಟೋ ಮನೆಯ ಶಂಕು ಸ್ಥಾಪನೆಯನ್ನು ಶುಕ್ರವಾರ ನೆರವೇರಿಸಿದರು.
ಭಗಿನಿ ಗ್ರೇಸಿ ಬಿ.ಎಸ್., ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲೈನಲ್ ಪಿಂಟೊ, ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಅಧ್ಯಕ್ಷ ಜಾರ್ಜ್ ಸಲ್ಡಾನ, ಉಪಾಧ್ಯಕ್ಷ ಜೊಕಿಂ ಪಿರೇರಾ, ಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜ, ಕೋಶಾಧಿಕಾರಿ ಜೆರೋಮ್ ಡಿ’ಸೋಜಾ, ರಾಫಾಯೆಲ್ ರೆಬೆಲ್ಲೊ, ಫೆಡ್ರಿಕ್ ಲೋಬೊ, ವಿನ್ಸೆಂಟ್ ಡಿ’ಸೋಜ, ಜೆರೋಮ್ ಡಿ’ಸೋಜ, ಸಿಸಿಲಿಯಾ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು

Comments

comments

Leave a Reply

Read previous post:
ಯಾಜ್ಞಸೇನಿ ಕೃತಿ ಬಿಡುಗಡೆ

ಕಿನ್ನಿಗೋಳಿ : ಪ್ರತಿಭಾ ರೇ ರಚಿತ ಡಾ. ವಿಶ್ವನಾಥ ಕಾರ್ನಾಡು ಅನುವಾದಿತ ಕಿನ್ನಿಗೋಳಿ ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಯಾಜ್ಞಸೇನಿ ಕಾದಂಬರಿಯನ್ನು ನಾಡೋಜ ಡಾ. ನಿಸಾರ್ ಅಹಮ್ಮದ್...

Close