ಪೊಯ್ಯ ಕುದ್ರು ಪಟ್ಟೆ ಹಳ್ಳಿ ಕ್ರೀಡೋತ್ಸವ

ಹಳ್ಳಿ ಕ್ರೀಡೆ ಮತ್ತು ಹಳ್ಳಿಯ ಪ್ರಶಾಂತ ಜೀವನ, ಸ್ವಚ್ಚ ಪರಿಸರ ದೇಹ ಹಾಗೂ ಮನಸ್ಸಿಗೆ ನೆಮ್ಮದಿ ತರುತ್ತದೆ ಪಾಶ್ಚಾತ್ಯೀಕರಣಕ್ಕೆ ಹೆಚ್ಚು ಮಾರು ಹೋಗಬಾರದು ಎಂದು ರಘುರಾಮ ಅಡ್ಯಂತಾಯ ಹೇಳಿದರು.

ಗೆಳೆಯರ ಬಳಗ ಪೊಯ್ಯ ಕುದ್ರು ಪಟ್ಟೆ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಳ್ಳಿ ಕ್ರೀಡೋತ್ಸವ(ಕೆಸರುಗದ್ದೆ) ಭಾನುವಾರ ಪಟ್ಟೆ ಪೊಯ್ಯ ಕುದ್ರು ವಿನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರ್ಕ್ ಡಿಸೋಜ ಕೊಡಂಗೆ ಕೆಸರು ಗದ್ದೆಗೆ ಚೆಂಡನ್ನು ಎಸೆಯುವ ಮೂಲಕ ಕ್ರೀಡೆಗೆ ಚಾಲನೆಯಿತ್ತರು. ಸಾರ್ವಜನಿಕರಿಗೆ ಮಡಕೆ ಒಡೆಯುವ ಸ್ಪರ್ಧೆ, ನಿಧಿ ಶೋಧನೆ, ಮಕ್ಕಳಿಗೆ ಸಂಗೀತ ಕುರ್ಚಿ, ಓಟದ ಸ್ಪರ್ಧೆ ಮತ್ತು ಹಗ್ಗ ಜಗ್ಗಾಟ (ಮಕ್ಕಳು, ಮಹಿಳೆ ಮತ್ತು ಪುರುಷ ವಿಭಾಗ) ಹಾಗೂ ಇತರ ಸ್ಪರ್ಧೆಗಳು ನಡೆದವು.
ಪಟ್ಟೆ ಭಂಡಾರ ಮನೆ ಉಜ್ಜು ಪೂಜಾರಿ, ಐಕಳ ಗ್ರಾಮ ಪಂಚಾಯಿತಿ ಸದಸ್ಯ, ಜಯಂತ ಪೂಜಾರಿ ಬೈಲಂಗಡಿ, ಹರೀಶ್ ಅಂಚನ್ ಪಟ್ಟೆ, ರಘುರಾಮ ಶೆಟ್ಟಿ ಪಟ್ಟೆ, ರಾಜೇಶ್ ದೊಡ್ಡಮನೆ, ದಿವಾಕರ ಸಾಲ್ಯಾನ್, ಗೆಳೆಯರ ಬಳಗ ಅಧ್ಯಕ್ಷ ರಮೇಶ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರವೀಣ್ ಸಾಲ್ಯಾನ್ ಸ್ವಾಗತಿಸಿ ರಘುರಾಮ್ ಅಮೀನ್ ವಂದಿಸಿದರು,. ಸಂದೀಪ್ ಶುಂಠಿಪಾಡಿ ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ಗಿಡಿಗೆರೆ ಕಾಲನಿ ಪರಿಸರ ಸ್ವಚ್ಚತೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೆನ್ನಬೆಟ್ಟು ಕಾರ್ಯಕ್ಷೇತ್ರದ ನಡುಗೋಡು-ಕೊಂಡೆಮೂಲದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು ಶ್ರಮದಾನ ಮಾಡುವ ಮೂಲಕ ಗಿಡಿಗೆರೆ ಕಾಲನಿ ಪರಿಸರವನ್ನು ಸ್ವಚ್ಚಗೊಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ...

Close