ರಿಕ್ಷಾ ಚಾಲಕರಲ್ಲಿ ಪ್ರಮಾಣಿಕರನ್ನು ಗುರುತಿಸಿ ಗೌರವಿಸಿರಿ

Narendra Kerekadu
ಮೂಲ್ಕಿ; ಸಮಾಜದಲ್ಲಿನ ಶ್ರಮ ಜೀವಿಗಳಾದ ಪ್ರಾಮಾಣಿಕ ರಿಕ್ಷಾ ಚಾಲಕರನ್ನು ಗೌರವಿಸಿ ಅವರನ್ನು ಗುರುತಿಸಬೇಕಾದುದ ಸಮಾಜದ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ, ಅವರ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಸಂಘಟನೆಗಳು ಹಾಕಿಕೊಳ್ಳಬೇಕು ಎಂದು ಮೂಲ್ಕಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು
ಮೂಲ್ಕಿಯ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸಂಯೋಜನೆಯಲ್ಲಿ ತುಳು ರಂಗಭೂಮಿಯ ಕಲಾವಿದರಾದ ದೇವದಾಸ್ ಕಾಪಿಕಾಡ್ ಮತ್ತು ಭೋಜರಾಜ್ ವಾಮಂಜೂರುರವರನ್ನು ಸನ್ಮಾನಿಸಿ ಮಾತನಾಡಿದರು.
ಮೂಲ್ಕಿ ರಿಕ್ಷಾ ಚಾಲಕ ಮಾಲೀಕರ ಸಂಘದ ಗೌರವಾಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್ ಅಧ್ಯಕ್ಷತೆ ವಹಿಸಿ ನಗರಕ್ಕಿಂತ ಗ್ರಾಮೀಣ ಭಾಗದ ರಿಕ್ಷಾ ಚಾಲಕರಿಗೆ ಸಮಾಜ ಸ್ಪಂದನೆಯ ಅವಶ್ಯಕತೆ ಇದೆ ಎಂದರು.
ಮೂಲ್ಕಿಯ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ವಕೀಲರಾದ ಬಿಪಿನ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಚಿತ್ರಾಪು ಹಾಜರಿದ್ದರು.
ರಿಕ್ಷಾ ಚಾಲಕರ ಮಕ್ಕಳ ವಿದ್ಯಾನಿಧಿಯ ಸಹಾಯಾರ್ಥ ಚಾಪರ‍್ಕ ಕಲಾವಿದರಿಂದ “ಯಾನ್ ಪಂಡೆಂದ್ ಪನೊಡ್ಚಿ” ಎಂಬ ತುಳು ನಾಟಕವನ್ನು ಪ್ರದರ್ಶಿಸಲಾಯಿತು.

Comments

comments

Leave a Reply

Read previous post:
ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ

ತೋಕೂರು: ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಆತಿಥ್ಯದಲ್ಲಿ, ಸಂತ ಅಲೋಶಿಯಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಐಟಿಐ ವಾಲಿಬಾಲ್ ಪಂದ್ಯಾಟದಲ್ಲಿ...

Close