ಸರಕಾರಿ ಶಿಕ್ಷಣ ಸಂಸ್ಥೆ: ಎನ್.ಎಸ್.ಎಸ್. ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾಜಿಕ ಚಟುವಟಿಕೆಗಳಿಗೆ ಒತ್ತುಕೊಡಬೇಕು. ಎನ್.ಎಸ್.ಎಸ್. ನಂತಹ ಶಿಬಿರಗಳು ಸಾಮಾಜಿಕ ಬದ್ದತೆ, ನಾಯಕತ್ವ, ವ್ಯಕ್ತಿತ್ವ ವಿಕಸನ ರೂಡಿಸಲು ಹಾಗೂ ಸುಪ್ತ ಪ್ರತಿಭೆಗೆ ಸಹಕಾರಿಯಾಗಿದೆ. ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು
ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಭವನದಲ್ಲಿ ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಶಿಬಿರ ಉದ್ಘಾಟಿಸಿದರು. ಪುನರೂರು ದೇವಳ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ, ಭುವನಾಭಿರಾಮ ಉಡುಪ, ಕಾಲೇಜು ಪ್ರಾಚಾರ್ಯೆ ಉಷಾ ಎನ್., ಶಿಬಿರಾಧಿಕಾರಿ ಎ. ಎಂ. ವಿಜಯಲಕ್ಷ್ಮೀ, ಸಹಶಿಬಿರರಾಧಿಕಾರಿ ವಿನೋದ ಬಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಚಿಲ್ಡ್ರನ್ ಪ್ಲೇ ಸ್ಕೂಲ್ ವಾರ್ಷಿಕೋತ್ಸವ

Raghunath Kamath ಕಿನ್ನಿಗೋಳಿ: ಕಿನ್ನಿಗೋಳಿ ಚಿಲ್ಡ್ರನ್ ಪ್ಲೇ ಸ್ಕೂಲ್‌ನ ವಾರ್ಷಿಕೋತ್ಸವ ಯುಗಪುರುಷ ಸಭಾ ಭವನದಲ್ಲಿ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಚಿಲ್ಡ್ರನ್ ಪ್ಲೇ...

Close