ಕಿರೆಂ ಚರ್ಚ್‌ನಲ್ಲಿ ಸೌಹಾರ್ದ ವಾರ್ಷಿಕ ಹಬ್ಬ

ಕಿನ್ನಿಗೋಳಿ : ದಾಮಸ್‌ಕಟ್ಟೆ ಕಿರೆಂ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರಿಗೆ ಅಡಿಕೆ , ವೀಳ್ಯ ಹಾಗೂ ಬಾಳೆಗೊನೆ ನೀಡುವ ಮೂಲಕ ಸೌಹಾರ್ದಕ್ಕೆ ವೇದಿಕೆಯಾಯಿತು.

ಹಿಂದೆ ಟಿಪ್ಪು ಸುಲ್ತಾನ್‌ನ ದಾಳಿಯ ಇತಿಹಾಸವುಳ್ಳ ಈ ಚರ್ಚ್‌ನ್ನು ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರು ರಕ್ಷಿಸಿದ್ದರು. ಆ ರಕ್ಷಣೆಯ ಸವಿನೆನಪಿಗಾಗಿ ಇಂದಿಗೂ ವಾರ್ಷಿಕ ಹಬ್ಬದಂದು ಆ ಗುತ್ತುಗಳಿಗೆ ಸಂಬಂಧಪಟ್ಟವರಿಗೆ ಬಾಳೆಗೊನೆ ನೀಡುವ ಮೂಲಕ ಗೌರವಿಸಲಾಗುತ್ತದೆ.

ಬಳ್ಳಾರಿ ಬಿಷಪ್ ರೆ|ಫಾ| ಹೆನ್ರಿ ಡಿಸೋಜ, ಕಿರೆಂ ಚರ್ಚಿನ ಧರ್ಮಗುರು ರೆ| ಫಾ| ಪಾವ್ಲ್ ಪಿಂಟೊ, ಪಾಲನಾ ಮಂಡಳಿ ಉಪಾಧ್ಯಕ್ಷ ರಾರ್ಬಟ್ ರೊಡ್ರಿಗಸ್, ಕಾರ್ಯದರ್ಶಿ ಮಾರ್ಸೆಲಿನ್ ಸಲ್ಡಾನ, ಸಂತಾನ್ ಡಿ’ಸೋಜಾ, ಬರ್ಟನ್ ಸಿಕ್ವೇರಾ ಉಪಸ್ಥಿತರಿದ್ದು ಐಕಳಬಾವದ ರಘುಚಂದ್ರ ಶೆಟ್ಟಿ, ತಾಳಿಪಾಡಿಗುತ್ತುವಿನ ಸುಕುಮಾರ್ ಶೆಟ್ಟಿ, ವಿಜಯ ಶೆಟ್ಟಿ, ಹಾಗೂ ಏಳಿಂಜೆ ಅಂಗಡಿಗುತ್ತು ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ ಗೌರವ ಸ್ವೀಕರಿಸಿದರು.

 

Comments

comments

Leave a Reply

Read previous post:
ದಾಮಸ್ಕಟ್ಟೆ ಕಿರೆಂ ಚರ್ಚ್‌ ವಾರ್ಷಿಕ ಹಬ್ಬ

Donald Dsouza Kirem ದಾಮಸ್ಕಟ್ಟೆ ಕಿರೆಂ ಚರ್ಚ್‌ನ ವಾರ್ಷಿಕ ಹಬ್ಬದ ಮೆರವಣಿಗೆ ಹಾಗೂ ಬಲಿ ಪೂಜೆ ಕಿರೆಂ ಚರ್ಚ್‌ನ ಧರ್ಮಗುರು ರೆ|ಫಾ| ಪಾವ್ಲ್ ಪಿಂಟೊ, ಬೆಳ್ತಂಗಡಿ ಚರ್ಚ್...

Close