ಮೆನ್ನಬೆಟ್ಟು ಕೃಷಿ ಸಂಕಿರಣ ಸಭೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ, ಸಾವಯವ ಗ್ರಾಮ ಸ್ಥಳ ಯೋಜನೆ ಮೆನ್ನಬೆಟ್ಟು ಇದರ ಜಂಟೀ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಕೃಷಿ ಸಂಕಿರಣ ಸಭೆ ಮಂಗಳವಾರ ನಡೆಯಿತು.
ಈ ಸಂದರ್ಭ ಜೀವಾಮೃತ ತಯಾರಿಕಾ ಫಟಕಕ್ಕೆ ಉಪಯೋಗವಾಗುವ ಡ್ರಮ್‌ಗಳನ್ನು ಅರ್ಹ ಫಲಾನುಬಾವಿಗಳಿಗೆ ಸಬ್ಸಿಡಿ ಮೂಲಕ ನೀಡಲಾಯಿತು.
ಸಾವಯವ ಕೃಷಿಯ ಮಹತ್ವ ಹಾಗೂ ಯೋಜನೆಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವ ಎಂ. ಹಾಗೂ ಕೃಷಿ ಅಧಿಕಾರಿ ಜನಾರ್ಧನ ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕಿ ಲತಾ ಕೆ. ಅಮೀನ್, ಸೇವಾನಿರತ ದೇವೇಂದ್ರ, ಕಿನಿಗೋಳಿ ವಲಯಾಧ್ಯಕ್ಷೆ ಸುಜಾತ, ಮೆನ್ನಬೆಟ್ಟು ಒಕ್ಕೂಟ ಅಧ್ಯಕ್ಷೆ ನಯನ ಶೆಟ್ಟಿ, ಜನಜಾಗೃತಿ ಸಮಿತಿ ವಲಯಾಧ್ಯಕ್ಷ ಯೋಗೀಶ್ ರಾವ್, ಸದಸ್ಯ ಕೆ. ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪಂಚಾಯಿತಿ ಪಿಡಿಒ ಗಣೇಶ ಬಡಿಗೇರ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ : ಶೌಚಾಲಯ ಕೊಡುಗೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಲನಿ ಸಮುದಾಯ ಅಭಿವೃದ್ಧಿ ಯೋಜನೆಯ ಅನುದಾನಲ್ಲಿ ಹಾಗೂ ಮೆನ್ನಬೆಟ್ಟು-ಕೊಂಡೆಮೂಲ ಸ್ವಸಹಾಯ ಸಂಘಗಳ ಶ್ರಮದಾನದ ಮೂಲಕ ಮಂಗಳವಾರ ಮೂರುಕಾವೇರಿ ಜಲ್ಲಿಗುಡ್ಡೆ ನಿವಾಸಿ ಅನಂತಯ್ಯ...

Close