ಗ್ರಾಮ ಪಂಚಾಯಿತಿ ಮಕ್ಕಳ ಭವಿಷ್ಯಕ್ಕೆ ನೆರವು

Narendra Kerekadu


ಕಿಲ್ಪಾಡಿ(ಮುಲ್ಕಿ); ಗ್ರಾಮ ಪಂಚಾಯಿತಿಯ ಮೂಲಕ ಸರ್ಕಾರಿ ಶಾಲೆಗಳಿಗೆ ವಿಶೇಷ ಆದ್ಯತೆ ನೀಡಿದಲ್ಲಿ ಸರ್ಕಾರಿ ಶಾಲೆಗಳ ಮೇಲಿನ ತಾತ್ಸಾರ ಭಾವನೆ ದೂರವಾಗುತ್ತದೆ ಅಲ್ಲದೇ ಗ್ರಾಮ ಪಂಚಾಯಿತಿ ಸದಸ್ಯರು ಸರ್ಕಾರಿ ಶಾಲೆಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿನ ಸಮಸ್ಯೆಗೆ ಸ್ಪಂದಿಸಲು ನೆರವಾಗಬೇಕು ಎಂದು ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಹೇಳಿದರು.
ಮೂಲ್ಕಿ ಬಳಿಯ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಸಂಯೋಜನೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಪಂಜಿನಡ್ಕದ ಕೆ.ಪಿ.ಎಸ್.ಕೆ ಸರ್ಕಾರಿ ಫ್ರೌಢಶಾಲೆಯಲ್ಲಿ ನಡೆಸಿ ಅದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಫ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತಕುಮಾರ್ ಮಕ್ಕಳ ಗ್ರಾಮ ಸಭೆಯನ್ನು ಉದ್ಘಾಟಿಸಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಶೋಭಾ ಎಚ್. ಮಾತನಾಡಿ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಗ್ರಾಮ ಪಂಚಾಯಿತಿಗಳು ನೆರವು ನೀಡಿ ಅವರ ಪ್ರತಿಭಾ ವಿಕಸಕ್ಕೆ ಸಹಕಾರಿ ಆಗಬೇಕು ಎಂದು ಹೇಳಿದರು.
ಮಕ್ಕಳಿಗೆ ಸ್ಚಚ್ಚತೆಯ ಭಾಷಣ ಮತ್ತು ಘೋಷಣೆಯ ಸ್ಪರ್ಧೆಯನ್ನು ನಡೆಸಲಾಯಿತು. ಮಂಗಳೂರಿನ ಹೊಂಗಿರಣ ಸಂಸ್ಥೆಯು ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ ಎಚ್‌ಐವಿ ರೋಗ ಲಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಚ್ಚುತ ಆಚಾರ್ಯ, ಪಂಚಾಯಿತಿ ಲೆಕ್ಕಾಧಿಕಾರಿ ಯೋಗಿಶ್ ನಾನಿಲ್, ಶಿಕ್ಷಕರಾದ ಕೇಶವ ಶೆಟ್ಟಿಗಾರ್, ಶಾಲಾ ನಾಯಕ ಚಿತ್ರರಂಜನ್, ಪಂಚಾಯಿತಿ ಸಿಬ್ಬಂದಿ ರಮೇಶ್ ಬಂಗೇರ, ಸುರೇಶ್ ಕೊಲಕಾಡಿ, ಅಂಗನವಾಡಿ ಕಾರ್ಯಕರ್ತೆ ಆಶಾ ಉಪಸ್ಥಿತರಿದ್ದರು.

 

 

Comments

comments

Leave a Reply

Read previous post:
ಐ.ಟಿ.ಐ ಎನ್.ಎಸ್.ಎಸ್ ವಾರ್ಷಿಕ ಶಿಬಿರ

ಕಿನ್ನಿಗೋಳಿ : ಎನ್.ಎಸ್.ಎಸ್.ನಲ್ಲಿ ಕಲಿತ ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿ ಸಮಾಜದ ಉತ್ತಮ ನಾಗರೀಕರಾಗಿರಿ ಎಂದು ವಿದ್ವಾನ್ ರಾಮಚಂದ್ರ ಭಟ್ ಹೇಳಿದರು. ಸೋಮವಾರ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ...

Close