ಐ.ಟಿ.ಐ ಎನ್.ಎಸ್.ಎಸ್ ವಾರ್ಷಿಕ ಶಿಬಿರ

ಕಿನ್ನಿಗೋಳಿ : ಎನ್.ಎಸ್.ಎಸ್.ನಲ್ಲಿ ಕಲಿತ ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿ ಸಮಾಜದ ಉತ್ತಮ ನಾಗರೀಕರಾಗಿರಿ ಎಂದು ವಿದ್ವಾನ್ ರಾಮಚಂದ್ರ ಭಟ್ ಹೇಳಿದರು.
ಸೋಮವಾರ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ನಡೆದ ತೋಕೂರು ತಪೋವನ ಎಂ.ಆರ್. ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ವಯಂ ಸೇವಕರು ಶಿಸ್ತು, ನಿಷ್ಠೆ, ಪರಿಶ್ರಮಗಳಿಂದ ಸಮಾಜದ ಸೇವೆಯನ್ನು ಮಾಡಿದರೆ ಅದುವೇ ಜನಾರ್ದನ ಸೇವೆಯಾಗುವುದು ಎಂದು ಧ್ವಜಾರೋಹಣಗೈದ ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಹೇಳಿದರು.
ಸಂಸ್ಠೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪದ್ಮಿನಿ ಶೆಟ್ಟಿ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ರಘುರಾಮ್ ರಾವ್ ಸ್ವಾಗತಿಸಿ ಸಹ ಶಿಬಿರಾಧಿಕಾರಿ ಹರಿ. ಎಚ್. ವಂದಿಸಿದರು. ದಯಾನಂದ ಲಾಗ್ವಣ್‌ಕರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಎನ್.ಎಸ್.ಎಸ್. ವಾರ್ಷಿಕ ಶಿಬಿರ

ಕಿನ್ನಿಗೋಳಿ :  ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ವಾರ್ಷಿಕ ಶಿಬಿರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ನಡೆಯುತ್ತಿದ್ದು ಶಿಬಿರಾಧಿಕಾರಿ ಎ. ಎಂ. ವಿಜಯಲಕ್ಷ್ಮೀ,...

Close