ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಕಿನ್ನಿಗೋಳಿ : ಜನರು ಸ್ವಚ್ಚ ಪರಿಸರ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಬೇಕು. ದುಶ್ಚಟಗಳಿಗೆ ಮಾರು ಹೋಗಬಾರದು ಎಂದು ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ವೈದ್ಯೆ ಭಗಿನಿ ಡಾ| ಜೀವಿತಾ ಹೇಳಿದರು.
ಸಂಜೀವಿನಿ ಮತ್ತು ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆ ಸಹಭಾಗಿತ್ವದಲ್ಲಿ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಜೀವಿನಿ ಸಂಚಾಲಕಿ ಸಿಸ್ಟರ್ ಹೋಪ್ ಪ್ರಸ್ತ್ತಾವನೆಗೈದರು. ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ರೇಖಾ ಪ್ರಧಾನ ಉಪನ್ಯಾಸವಿತ್ತರು. ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್, ದಿನೇಶ್ ಉಪಸ್ಥಿತರಿದ್ದರು.
ಸರೋಜಿನಿ ಸ್ವಾಗತಿಸಿ ಜಯಂತಿ ವಂದಿಸಿದರು. ಬಿಂದಿಯಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಸುಖಾನಂದ ಶೆಟ್ಟಿ, ಪ್ರೇಮ್, ದಿನೇಶ್ ಸಂಸ್ಮರಣಾ ಕಾರ್ಯಕ್ರಮ

Narendra Kerekad ಮೂಲ್ಕಿ; ಗ್ರಾಮೀಣ ಭಾಗದಿಂದ ತಳಮಟ್ಟದ ಕಾರ್ಯಕರ್ತರ ಒಗ್ಗೂಡುವಿಕೆಯಿಂದ ಇಂದು ಬಿಜೆಪಿ ಪಕ್ಷವು ಬೆಳೆದು ಬಂದಿದ್ದು ಅದು ಎಂದಿಗೂ ಕಾರ್ಯಕರ್ತರ ಪಕ್ಷವಾಗಿದ್ದು ನಾಯಕನ್ನು ಕಾರ್ಯಕರ್ತರೆ ನಿರ್ಧರಿಸುವ ಹಕ್ಕನ್ನು...

Close