ಅಂಗರಗುಡ್ಡೆ ಶ್ರೀ ರಾಮ ಮಂದಿರ ನೂತನ ಕಟ್ಟಡ ಲೋಕಾರ್ಪಣ

ಕಿನ್ನಿಗೋಳಿ: ಮಠ, ಮಂದಿರಗಳು ಧರ್ಮ ಸಂಸ್ಕಾರ ಸಂಸ್ಕ್ರತಿಯ ಕೇಂದ್ರವಾಗಬೇಕು. ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಹೇಳಿದರು.

ಶನಿವಾರ ಅಂಗರಗುಡ್ಡೆ ರಾಮನಗರದಲ್ಲಿ ಶ್ರೀ ರಾಮ ಭಜನಾ ಮಂಡಳಿಯ ಶ್ರೀ ರಾಮ ಮಂದಿರದ ನೂತನ ಕಟ್ಟಡದ ಲೋಕಾರ್ಪಣ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ವೆ|ಮೂ|ನಾರಾಯಣ ಭಟ್ ಕಿಲ್ಪಾಡಿ ಆಶೀರ್ವಚನಗೈದರು.
ಪಠೇಲ್ ವಾಸುದೇವ ರಾವ್ ಪುನರೂರು, ಮೀನಾಕ್ಷಿ ದೇವಾಡಿಗ ಅಂಗರಗುಡ್ಡೆ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಮುಂಬಯಿ ಉದ್ಯಮಿ ಕಿಶೋರ್ ದೇವಾಡಿಗ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಜಯ. ಎ. ಶೆಟ್ಟಿ, ಸಮಿತಿ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಹಳೆಯಂಗಡಿ, ಮಂದಿರದ ಅಧ್ಯಕ್ಷ ತಾರಾನಾಥ ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಕಮಲಾಕ್ಷಿ ದೇವಾಡಿಗ, ಕೃಷ್ಣ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಜೀರ್ಣೋದ್ದಾರ ಮುಂಬಯಿ ಸಮಿತಿ ಅಧ್ಯಕ್ಷ ಜಿ.ಕೆ ಕೆಂಚನಕೆರೆ ಪ್ರಸ್ತಾವನೆಗೈದರು, ಪ್ರವೀಣ್ ಆರ್.ಶೆಟ್ಟಿ ಮುಂಬಯಿ ಕಾರ್ಯಕ್ರಮ ನಿರೂಪಿಸಿದರು, ನವೀನ್ ಚಂದ್ರ ವಂದಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಬೀದಿ ನಾಟಕ

ಕಿನ್ನಿಗೋಳಿ:  ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ವಿದ್ಯಾರ್ಥಿನಿಯರು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಶನಿವಾರ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಏಡ್ಸ್ ಜಾಗೃತಿಯ ಬಗ್ಗೆ...

Close