ಸುಖಾನಂದ ಶೆಟ್ಟಿ, ಪ್ರೇಮ್, ದಿನೇಶ್ ಸಂಸ್ಮರಣಾ ಕಾರ್ಯಕ್ರಮ

Narendra Kerekad
ಮೂಲ್ಕಿ; ಗ್ರಾಮೀಣ ಭಾಗದಿಂದ ತಳಮಟ್ಟದ ಕಾರ್ಯಕರ್ತರ ಒಗ್ಗೂಡುವಿಕೆಯಿಂದ ಇಂದು ಬಿಜೆಪಿ ಪಕ್ಷವು ಬೆಳೆದು ಬಂದಿದ್ದು ಅದು ಎಂದಿಗೂ ಕಾರ್ಯಕರ್ತರ ಪಕ್ಷವಾಗಿದ್ದು ನಾಯಕನ್ನು ಕಾರ್ಯಕರ್ತರೆ ನಿರ್ಧರಿಸುವ ಹಕ್ಕನ್ನು ಹೊಂದಿದ ಪಕ್ಷವಾಗಿದೆ ಎಂದು ಸಂಸದ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು.
ಮೂಲ್ಕಿಯ ಬಿಜೆಪಿಯ ನಾಯಕರಾಗಿದ್ದು ದುಷ್ಕರ್ಮಿಗಳ ಸಂಚಿನಿಂದ ಬಲಿಯಾದ ಸುಖಾನಂದ ಶೆಟ್ಟಿ ಹಾಗೂ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಬಿಜೆಪಿ ಕಾರ್ಯರ್ತರಾದ ಪ್ರೇಮ್ ಚಿತ್ರಾಪು, ದಿನೇಶ್ ಬಪ್ಪನಾಡುರವರ ಸ್ಮರಣಾರ್ಥ ಮೂಲ್ಕಿ ಬಪ್ಪನಾಡಿನಲ್ಲಿ ಶನಿವಾರ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಅರವಿಂದ ಪೂಂಜಾರವರ ನೇತೃತ್ವದಲ್ಲಿ ಮೂಲ್ಕಿ ಕಾರ್ನಾಡು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಹಿರಿಯ ಬಿಜೆಪಿ ನಾಯಕ ಸತೀಶ್ ಭಟ್ ಕೊಳುವೈಲು ಮಾತನಾಡಿ ಸುಖಾನಂದ ಶೆಟ್ಟರ ಕನಸಿನಂತೆ ಮೂಲ್ಕಿ ಮೂಡಬಿದಿರೆಯಲ್ಲಿ ಬಿಜೆಪಿಯ ಧ್ವಜ ಈ ಬಾರಿಯಾದರೂ ಹಾರಬೇಕು ಮೂಲ್ಕಿಯಲ್ಲಿ ಸುಖಾನಂದ, ಪ್ರೇಮ್, ದಿನೇಶ್‌ವರ ನೆನಪಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದರು.
ಮೂಲ್ಕಿ ಕ್ಷೇತ್ರದ ಅಧ್ಯಕ್ಷ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ನಗರದ ಅಧ್ಯಕ್ಷ ಉಮೇಶ್ ಮಾನಂಪಾಡಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಆದರ್ಶ ಶೆಟ್ಟಿ ಎಕ್ಕಾರು, ಶಕ್ತಿ ಕೇಂದ್ರ ಕಾರ್ಯದರ್ಶಿ ಶೈಲೇಶ್‌ಕುಮಾರ್, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯರಾದ ಸತೀಶ್ ಅಂಚನ್, ಸುನಿಲ್ ಆಳ್ವಾ, ವಿಠಲ, ಪುರುಷೋತ್ತಮ ರಾವ್, ಬಿಜೆಪಿಯ ಕ್ಷೇತ್ರ ಯುವ ಮೋರ್ಛಾದ ಮಾಜಿ ಅಧ್ಯಕ್ಷ ರಮಾನಾಥ ಪೈ ಇನ್ನಿತರರು ಹಾಜರಿದ್ದರು.

Comments

comments

Leave a Reply

Read previous post:
ಅಂಗರಗುಡ್ಡೆ ಶ್ರೀ ರಾಮ ಮಂದಿರ ನೂತನ ಕಟ್ಟಡ ಲೋಕಾರ್ಪಣ

ಕಿನ್ನಿಗೋಳಿ: ಮಠ, ಮಂದಿರಗಳು ಧರ್ಮ ಸಂಸ್ಕಾರ ಸಂಸ್ಕ್ರತಿಯ ಕೇಂದ್ರವಾಗಬೇಕು. ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಹೇಳಿದರು. ಶನಿವಾರ ಅಂಗರಗುಡ್ಡೆ ರಾಮನಗರದಲ್ಲಿ ಶ್ರೀ ರಾಮ...

Close