ಕಿನ್ನಿಗೋಳಿ ಲಿಟ್ಲ್ ಪ್ಲವರ್ ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ, ಸಾಧನೆ ಬಾಳಿನ ಯಶಸ್ಸಿಗೆ ದಾರಿ ದೀಪ ಎಂದು ಕಿನ್ನಿಗೋಳಿ ಬೆಥನಿ ಶಿಕ್ಷಣ ಸಮೂಹ ಸಂಸ್ಥೆ ಸಂಚಾಲಕಿ ವಂ. ಭಗಿನಿ ಅಕ್ವಿಲ್ಲಾ ಬಿ. ಎಸ್. ಹೇಳಿದರು.
ಸೋಮವಾರ ಕಿನ್ನಿಗೋಳಿ ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಪೀರಿಯರ್ ಮೇರಿವೇಲ್ ಕಾನ್ವೆಂಟ್ ವಂ. ಭಗಿನಿ ವಿತಾಲಿಸ್ ಬಿ.ಎಸ್., ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಅನಂತರಾಮ್ ರಾವ್, ಲಿಟ್ಲ್ ಪ್ಲವರ್ ಹಳೇ ವಿದ್ಯಾರ್ಥಿನಿ ಕಾಂಚನ ಉಡುಪ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಂ. ಭಗಿನಿ ಗೇಸಿ ಬಿ. ಎಸ್. ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕ ಅಬ್ದುಲ್ ರೆಹಮಾನ್ ವರದಿ ವಾಚಿಸಿದರು. ಸಹ ಶಿಕ್ಷಕಿ ಪದ್ಮಾವತಿ ವಂದಿಸಿದರು. ಸಹ ಶಿಕ್ಷಕಿ ಸೆಲಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಸುಖಾನಂದ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ

Raghunath Kamath ಕಿನ್ನಿಗೋಳಿ: ಸನಾತನ ಸಂಸ್ಕೃತಿಯಿಂದ ಹಿಂದೂ ಧರ್ಮ ನೆಲೆ ನಿಂತಿದೆ. ಸಂಸ್ಕಾರ ರೀತಿ ನಿಯಮಗಳನ್ನು ಪಾಲಿಸುವುದು ನಮ್ಮ ಹೊಣೆಯಾಗಿದೆ ಎಂದು ಚಿಕ್ಕಮಗಳೂರು ರಾಂಪುರದ ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ...

Close