ಶ್ರೀರಾಮ ಭಜನಾ ಮಂಡಳಿ ಪ್ರತಿಷ್ಠಾ ಮಹೋತ್ಸವ

Bhagyavan Sanil

ಕಿನ್ನಿಗೋಳಿ: ಭಜನೆಯಿಂದ ಏಕಾಗ್ರತೆ, ಮನಶಾಂತಿ, ಸಂಘಟನೆ, ಸನಾತನ ಸಂಸ್ಕೃತಿ, ಸದ್ವಿಚಾರಗಳ ಜೊತೆಗೆ ಆಧ್ಯಾತ್ಮದ ಒಲವು ಮೂಡಿ ಜನರಲ್ಲಿ ಶಾಂತಿ ಸಮಾಧಾನ ಪ್ರವೃತ್ತಿ ಹೆಚ್ಚಲು ಸಾದ್ಯ ಎಂದು ವೇ.ಮೂ. ಕೆ. ವಾದಿರಾಜ ಉಪಾಧ್ಯಾಯ ಹೇಳಿದರು.
ಭಾನುವಾರ ಕೆಂಚನಕೆರೆ ಅಂಗರಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ರಾಮ ಭಜನಾ ಮಂಡಳಿ ಕಟ್ಟಡದ ಲೋಕಾರ್ಪಣೆ ಸಂದರ್ಭ ನಡೆದ ಸಭಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಯ.ಎ.ಶೆಟ್ಟಿ, ಕಾರ್ಯದರ್ಶಿ ಕೃಷ್ಣ ಶೆಟ್ಟಿಗಾರ್,ಮುಂಬೈ ಸಮಿತಿ ಅಧ್ಯಕ್ಷ ಜಿ.ಕೆ.ಕಂಚನಕೆರೆ, ಪಟೇಲ್ ವಾಸುದೇವ ರಾವ್, ಮಂದಿರದ ಅಧ್ಯಕ್ಷ ತಾರಾನಾಥ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಜಯ.ಎ.ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಮುಂಜಾನೆ ಉದಯ ಲಗ್ನದಲ್ಲಿ ವೇಮೂ ಕಿಲ್ಪಾಡಿ ನಾರಾಯಣ ಭಟ್ ನೇತೃತ್ವದಲ್ಲಿ ಶ್ರೀ ರಾಮ ದೇವರ ಪ್ರತಿಷ್ಠಾ ಮಹೋತ್ಸವ ನಡೆಯಿತು.

Comments

comments

Leave a Reply

Read previous post:
ಡಾ| ಕ್ಲಾಯ್ನ್ ದಾಂತೀಸ್ ಗೆ ಸನ್ಮಾನ

Lionel Pinto ಕಿನ್ನಿಗೋಳಿ: ಕಿನ್ನಿಗೋಳಿ ಚರ್ಚ್‌ನ ಸಂತ ಪ್ರಾನ್ಸಿಸ್ ಝೇವಿಯರ್ ವಾಳೆಯ ವಾರ್ಷಿಕೋತ್ಸವದಂದು ಡಾ| ಕ್ಲಾಯ್ನ್ ದಾಂತೀಸ್ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ|...

Close