ಸುಖಾನಂದ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ

Raghunath Kamath

ಕಿನ್ನಿಗೋಳಿ: ಸನಾತನ ಸಂಸ್ಕೃತಿಯಿಂದ ಹಿಂದೂ ಧರ್ಮ ನೆಲೆ ನಿಂತಿದೆ. ಸಂಸ್ಕಾರ ರೀತಿ ನಿಯಮಗಳನ್ನು ಪಾಲಿಸುವುದು ನಮ್ಮ ಹೊಣೆಯಾಗಿದೆ ಎಂದು ಚಿಕ್ಕಮಗಳೂರು ರಾಂಪುರದ ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದ ಹೇಳಿದರು.
ಭಾನುವಾರ ಬೆಳಾಯರು ಕೆ.ಎಚ್.ಭಿ. ಕಾಲನಿ ಛತ್ರಪತಿ ಶಿವಾಜಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ತೋಕೂರು, ಕೆರೆಕಾಡು ಬೆಳಾಯರು ಘಟಕದ ಜಂಟೀ ಆಶ್ರಯದಲ್ಲಿ ಹುತಾತ್ಮ ಹಿಂದೂ ವೀರರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಧರ್ಮದ ಬಗ್ಗೆ ಹಿತವಚನ ನೀಡಿದರು. ಮುಲ್ಕಿ ಸೀಮೆ ಅರಸು ಕಂಬಳದ ಅಧ್ಯಕ್ಷ ರಾಮಚಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ತೋಕೂರು ಬಿಲ್ಲವ ಸಂಘದ ಅಧ್ಯಕ್ಷ ಎಲ್. ಕೆ ಸಾಲ್ಯಾನ್ ಸುಖಾನಂದ ಶೆಟ್ಟಿ ನಗರ ನಾಮಕರಣ ಮಾಡಿದರು. ಕುಬೆವೂರು ನಾರಾಯಣ ಆಳ್ವ, ಕುಳಾಯಿಯ ಕಲಾಕುಂಭ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷ ನಾಗೇಶ್ ಕುಲಾಲ್, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಶೆಟ್ಟಿಗಾರ್, ಉದ್ಯಮಿ ಕರುಣಾಕರ ಆಚಾರ್ಯ ಹಳೆಯಂಗಡಿ, ಟಿ.ಎನ್. ರವೀಂದ್ರನ್, ಕೆರೆಕಾಡು, ಸಂತೋಷ ಶೆಟ್ಟಿ, ಕೆರೆಕಾಡು ಘಟಕದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ, ಸಂಚಾಲಕ ಸಮತೋಷ ದೇವಾಡಿಗ, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿಗಾರ್ ಸ್ವಾಗತಿಸಿ, ಹರಿದಾಸ್ ಭಟ್ ತೋಕೂರು ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಶ್ರೀರಾಮ ಭಜನಾ ಮಂಡಳಿ ಪ್ರತಿಷ್ಠಾ ಮಹೋತ್ಸವ

Bhagyavan Sanil ಕಿನ್ನಿಗೋಳಿ: ಭಜನೆಯಿಂದ ಏಕಾಗ್ರತೆ, ಮನಶಾಂತಿ, ಸಂಘಟನೆ, ಸನಾತನ ಸಂಸ್ಕೃತಿ, ಸದ್ವಿಚಾರಗಳ ಜೊತೆಗೆ ಆಧ್ಯಾತ್ಮದ ಒಲವು ಮೂಡಿ ಜನರಲ್ಲಿ ಶಾಂತಿ ಸಮಾಧಾನ ಪ್ರವೃತ್ತಿ ಹೆಚ್ಚಲು ಸಾದ್ಯ ಎಂದು...

Close