548 ನೇ ಬಳ್ಕುಂಜೆಯಲ್ಲಿ ಮದ್ಯವರ್ಜನ ಶಿಬಿರ

ಕರ್ನಿರೆ: ದುಶ್ಚಟಗಳಿಂದ ದೂರವಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಪಾನಮುಕ್ತರಾಗಿ ಒಳ್ಳೆಯ ಜೀವನ ನಡೆಸಿರಿ ಎಂದು ಮಂಗಳೂರು ಗ್ರಾಮಾಂತರ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಶಾಂತ್ ಗಟ್ಟಿ ಕರೆಯಿತ್ತರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಕಿನ್ನಿಗೋಳಿ ವಲಯ, ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ ಕಿನ್ನಿಗೋಳಿ ವಲಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕರ್ನಿರೆ, ಲಯನ್ಸ್ ಕ್ಲಬ್ ಕಿನ್ನಿಗೋಳಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳವಾರ ಕರ್ನಿರೆ ಶ್ರೀ ವಿಷ್ಣುಮೂರ್ತಿ ಸಭಾಭವನದಲ್ಲಿ ನಡೆದ 548ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಿರೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೊಕ್ತೇಸರ ಅನಂತಪದ್ಮನಾಭ ಭಟ್ ಶಿಬಿರ ಉದ್ಘಾಟಿಸಿದರು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಂಗಳೂರು ನಿರ್ದೇಶಕ ಟಿ. ಸಂಪತ್ ಕುಮಾರ್ , ಮಂಗಳೂರು ತಾಲೂಕು ಯೋಜನಾಧಿಕಾರಿ ರಾಘವ ಎಂ. ಬಳ್ಕುಂಜೆ ಸಂತ ಪೌಲರ ಇಗರ್ಜಿ ಧರ್ಮಗುರು ಫಾ| ಹಿಲರಿ ಲೋಬೊ, ಕರ್ನಿರೆ ಜುಮ್ಮಾ ಮಸೀದಿ ಧರ್ಮಗುರು ಪಿ.ಪಿ.ಅಹಮ್ಮದ್ ಸಖಾಪಿ, ಮುಂಬಯಿ ಬಂಟರ ಸಂಘ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನಿರೆ, ಮಂಗಳೂರು ಗ್ರಾಮಾಂತರ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಭುವನಾಭಿರಾಮ ಉಡುಪ, ಬಳ್ಕುಂಜೆ ಗ್ರಾ. ಪಂ. ಅಧ್ಯಕ್ಷೆ ಗೀತಾ ಅಮೀನ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷ ದೇವದಾಸ ಪುನರೂರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕಿನ್ನಿಗೋಳಿ ವಲಯಾದ್ಯಕ್ಷೆ ಸುಜಾತ, ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆಯ ರಾಘವೇಂದ್ರ ಆಚಾರ್ಯ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಹಾಜಿ ಕೆ. ಎಸ್. ಸೈಯದ್ ಕರ್ನಿರೆ, ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ, ಆಲ್ವಿನ್ ಡಿಸೋಜ, ಉಪಸ್ಥಿತರಿದ್ದರು.

ಮೇಲ್ವಿಚಾರಕಿ ಲತಾ ಅಮೀನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸುರೇಶ್ ಕವತ್ತಾರು ವಂದಿಸಿದರು. ಎಕ್ಕಾರು ಸೇವಾನಿರತ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ತೋಕೂರು ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ಎನ್.ಎಸ್.ಎಸ್.ನಲ್ಲಿ ಕಲಿತ ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿ ಸಮಾಜಕ್ಕೆ ಯೋಗ್ಯ ವ್ಯಕ್ತಿಗಳಾಗಿ ಬಾಳಿ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ ಪುನರೂರು ಹೇಳಿದರು. ಶಿಮಂತೂರು ಶ್ರೀ...

Close