ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆ

ಕಿನ್ನಿಗೋಳಿ: ಇಂದಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮಹಿಳೆಯರು ಜಾಗೃತರಾಗಬೇಕು. ಮಾನಸಿಕ ಸ್ಥೆರ್ಯ, ಆರೋಗ್ಯವಂತ ಸುಶಿಕ್ಷಿತರಾಗಿ ಮಹಿಳೆಯರು ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು.
ಕೊರಗಾಭಿವೃದ್ಧಿ ಸಂಘ ಹಾಗೂ ಉಡುಪಿ ಸಮಗ್ರ ಗ್ರಾಮೀಣ ಆಶ್ರಮದ ಜಂಟೀ ಆಶ್ರಯದಲ್ಲಿ ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆ ಹಾಗೂ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಹಿಂಸೆ ವಿರುದ್ಧ ಅಭಿಯಾನ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಕೊರಗಾಭಿವೃದ್ದಿ ಸಂಘ ಅಧ್ಯಕ್ಷ ಶೇಖರ ಕೊರಗ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಲಿಂಕ್ಸ್ ಸಂಸ್ಥೆಯ ದಿವಾಕರ ಪೂಜಾರಿ ಪ್ರಧಾನ ಉಪನ್ಯಾಸ ನೀಡಿದರು. ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ಉಪಸ್ಥಿತರಿದ್ದರು.
ನಾಗಿಣಿ ಸ್ವಾಗತಿಸಿ, ಪದ್ಮಾ ಪ್ರಸ್ತಾವನೆಗೈದರು. ಪ್ರಕಾಶ್ ಕೆ ಕಾರ್ಯಕ್ರಮ ನಿರೂಪಿಸಿದರು.

 ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಮಾಹಿತಿ ಕಾರ್ಯಗಾರ ಉದ್ಘಾಟಿಸಿದರು.

Comments

comments

Leave a Reply

Read previous post:
548 ನೇ ಬಳ್ಕುಂಜೆಯಲ್ಲಿ ಮದ್ಯವರ್ಜನ ಶಿಬಿರ

ಕರ್ನಿರೆ: ದುಶ್ಚಟಗಳಿಂದ ದೂರವಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಪಾನಮುಕ್ತರಾಗಿ ಒಳ್ಳೆಯ ಜೀವನ ನಡೆಸಿರಿ ಎಂದು ಮಂಗಳೂರು ಗ್ರಾಮಾಂತರ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಶಾಂತ್ ಗಟ್ಟಿ ಕರೆಯಿತ್ತರು. ಶ್ರೀ ಕ್ಷೇತ್ರ...

Close