ಕರಾವಳಿಯಲ್ಲಿ ಬಿಜೆಪಿ ಮರಳಿ ಗೆಲ್ಲಲಿದೆ ; ನಳಿನ್‌ಕುಮಾರ್

Narendra Kerekad

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಜೆಪಿಯಾಗಲಿ, ಕಾಂಗ್ರೇಸ್, ಜೆಡಿಎಸ್‌ನಿಂದಾಗಲಿ ಕರಾವಳಿಯ ಬಿಜೆಪಿಗೆ ಧಕ್ಕೆಯಿಲ್ಲ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಎಂಟು ಕ್ಷೇತ್ರದಲ್ಲಿಯೂ ಬಿಜೆಪಿ ಪಕ್ಷವೇ ಜಯ ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.

ಕೆಂಚನಕೆರೆ ಅಂಗರಗುಡ್ಡೆ ಬಳಿಯ ಶ್ರೀ ರಾಮ ಭಜನಾ ಮಂದಿರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದರು. ಧನಂಜಯಕುಮಾರ್ ಬಿಜೆಪಿಯ ಎಲ್ಲಾ ಸಂಪರ್ಕವನ್ನು ಬಿಟ್ಟು ಹೋಗಿದ್ದು ಅವರೊಂದಿಗೆ ಕರಾವಳಿಯ ಯಾವುದೇ ಕಾರ್ಯಕರ್ತನೂ ಸಹ ಕೆಜಿಪಿಗೆ ಹೋಗುವುದಿಲ್ಲ, ಈಗಾಗಲೇ ಬಿಜೆಪಿ ಈ ಭಾಗದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಲ್ಲಿ ಸ್ಥಾನ ಹೊಂದಿದೆ ತಳಮಟ್ಟದಲ್ಲಿ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿಯ ಗೆಲುವಿನ ಹಾದಿಗೆ ಯಾವುದೇ ಪಕ್ಷಗಳು ತಡೆನೀಡುವುದಕ್ಕೆ ಸಾಧ್ಯವಿಲ್ಲ ಎಂದರು.
ಬಿಜೆಪಿಯಲ್ಲಿ ಆಪರೇಷನ್ ಕಮಲ ಎಂಬ ಸಂಸ್ಕೃತಿ ಇಲ್ಲ ಆದರೆ ಪಕ್ಷದ ಸಿದ್ಧಾಂತ ಒಪ್ಪಿ ಅನ್ಯ ಪಕ್ಷದಿಂದ ಬಿಜೆಪಿಗೆ ಬರುವವರಿಗೆ ಸ್ವಾಗತ ಇದ್ದು ಚುನಾವಣೆ ಹತ್ತಿರ ಬರುವಾಗ ರಾಜಕೀಯದಲ್ಲಿ ಏರು ಪೇರಾಗುವುದು ಸಹಜ ಪ್ರಕ್ರಿಯೆ ಇದಕ್ಕೆ ಕಾರ್ಯಕರ್ತರು ಗೊಂದಲಕ್ಕೀಡಾಬಾರದು, ನಾನು ಪ್ರಸ್ತುತ ಲೋಕಸಭಾ ಸದಸ್ಯನಾಗಿರುವುದರಿಂದ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಕಡಿಮೆ, ಧನಂಜಯ ಕುಮಾರ್ ಮಂಗಳೂರಿನಲ್ಲಿ ಸ್ಪರ್ಧಿಸಿದರೆ ಜನರೇ ಉತ್ತರಿಸುತ್ತಾರೆ ಎಂದರು.
ಕರಾವಳಿಯಲ್ಲಿ ಸ್ವಹಿತಕ್ಕಾಗಿ ಪಕ್ಷವನ್ನು ಬಿಡುವವರಿಗೆ ಜಿಲ್ಲೆಯಲ್ಲಿನ ಶಕುಂತಲಾ ಶೆಟ್ಟಿ, ರುಕ್ಮಯ್ಯ ಪೂಜಾರಿ, ಜಯರಾಂ ಶೆಟ್ಟಿ ಹಾಗೂ ರಾಜ್ಯ, ರಾಷ್ಟ್ರದಲ್ಲಿಯೂ ಅನೇಕ ನಾಯಕರ ಉದಾಹರಣೆಯನ್ನು ನೀಡಬಹುದು ಎಂದು ನಾಗರಾಜ ಶೆಟ್ಟಿಯವರು ಪಕ್ಷ ತ್ಯಜಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಸಧೃಢ ಪಕ್ಷದ ಗಟ್ಟಿ ನೆಲೆಯಲ್ಲಿ ಮಾತ್ರ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸಲು ಸಾಧ್ಯ ಎಂಬುದನ್ನು ಜನರೇ ತೋರಿಸಿಕೊಟ್ಟಿದ್ದಾರೆ ಎಂದರು.

 

Comments

comments

Leave a Reply

Read previous post:
ಕ್ರೀಡೆಗಳಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ

ಕಿನ್ನಿಗೋಳಿ : ವಿದ್ಯಾರ್ಥಿಗಳ ಜೀವನದಲ್ಲಿ ಸಚ್ಚಾರಿತ್ರ್ಯ ನಿರ್ಮಾಣಕ್ಕೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಧನಾತ್ಮಕ ಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು...

Close