ಮೆನ್ನಬೆಟ್ಟು ಪೈಪ್ ಲೈನ್ ಕಾಮಗಾರಿ- ಗುದ್ದಲಿ ಪೂಜೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರಿನ ಯೋಜನೆ ಅನುದಾನದಿಂದ ಮೂರು ಲಕ್ಷ ವೆಚ್ಚದ ಪೈಪ್ ಲೈನ್ ಕಾಮಗಾರಿಯ ಗುದ್ದಲಿ ಪೂಜೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಉಲ್ಲಂಜೆ ಪರಿಸರದಲ್ಲಿ ನಡೆಯಿತು.
ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಗುದ್ದಲಿ ಪೂಜೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಪಂಚಾಯಿತಿ ಸದಸ್ಯರಾದ ಜಯಶಂಕರ ರೈ, ಅರುಣ್ ಕುಮಾರ್, ಭಾಸ್ಕರ ಉಲ್ಲಂಜೆ, ಕೇಶವ್, ವಿಶ್ವನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು

Raghunath Kamath ಕಿನ್ನಿಗೋಳಿ:  ಆಡು ಭಾಷೆಯಾದ ಕನ್ನಡದ ಕೀಳರಿಮೆ ಸಲ್ಲದು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಪಡೆದವರು ಸಮಾಜದಲ್ಲಿ ಉತ್ತಮ ಸಾಧನೆ ತೋರಿದ್ದಾರೆ ಎಂದು ಯುಗಪುರುಷ ಪ್ರಧಾನ ಸಂಪಾದಕ...

Close