ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ:  ಪ್ರಾಥಮಿಕ ಹಂತದ ಉತ್ತಮ ಶಿಕ್ಷಣವೇ ಮಕ್ಕಳ ಭವಿಷ್ಯದ ಭದ್ರ ಭುನಾದಿ ಎಂದು ಖ್ಯಾತ ವೈದ್ಯ ಡಾ.ಭಾಸ್ಕರಾನಂದ ಕುಮಾರ್ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಸಂಜೀವನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ಜಿ.ಪಂ.ಸದಸ್ಯ ಈಶ್ವರ್ ಕಟೀಲ್, ದೇವೀಪ್ರಸಾದ ಶೆಟ್ಟಿ, ಮುಂಬೈನ ಉದ್ಯಮಿ ಜೆ.ಸಿ.ಕುಮಾರ್, ಕೇಶವ ನಾಯಕ್, ಎಂ.ಜಗದೀಶ ನಾವಡ, ಮುಖ್ಯ ಶಿಕ್ಷಕಿ ಮಾಲತಿ, ಶಾಲಾ ನಾಯಕಿ ಅನುಷಾ ಡಿ. ಮತ್ತಿತರರು ಉಪಸ್ಥಿತರಿದ್ದರು. ಸಾಧನೆಗೈದ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ನಾಟಕ, ಯಕ್ಷಗಾನ, ನೃತ್ಯ ವೈವಿಧ್ಯಗಳು ನಡೆದವು.

 

Comments

comments

Leave a Reply

Read previous post:
ಮೆನ್ನಬೆಟ್ಟು ಪೈಪ್ ಲೈನ್ ಕಾಮಗಾರಿ- ಗುದ್ದಲಿ ಪೂಜೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರಿನ ಯೋಜನೆ ಅನುದಾನದಿಂದ ಮೂರು ಲಕ್ಷ ವೆಚ್ಚದ ಪೈಪ್ ಲೈನ್ ಕಾಮಗಾರಿಯ ಗುದ್ದಲಿ ಪೂಜೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ...

Close