ಐಕಳ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿಗೆ ಒಳಪಟ್ಟ ಐಕಳ, ಏಳಿಂಜೆ ಮತ್ತು ಉಳೆಪಾಡಿ ಗ್ರಾಮಗಳ2012-13ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ದಾಮಸ್‌ಕಟ್ಟೆ ಕಿರೆಂ ಚರ್ಚ್ ಮಿನಿ ಹಾಲ್‌ನಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆರು ತಿಂಗಳಿನಿಂದ ಚರ್ಚೆಯಲ್ಲಿ ಉಳಿದಿದ್ದ 50 ಮೀಟರ್ ಕಂಗುರಿ ಕುಕ್ಕಟ್ಟೆ ಕಾಂಕ್ರೀಟ್ ರಸ್ತೆ ರಚನೆ, ಪಟ್ಟೆ ಯಿಂದ ಪೆರ್ಗುಂಡಿವರೆಗೆ ರಸ್ತೆ ಡಾಮಾರೀಕರಣ, ಪೆರ್ಮುದೆಯಿಂದ ಸಂಕಲಕರಿಯ ಸೇತುವೆ ತನಕ ರಸ್ತೆ ಡಾಮಾರೀಕರಣ ಆಗಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಕಂಗುರಿ ಉಳೆಪಾಡಿಗಳಲ್ಲಿ ನೀರಿನ ಸೌಕರ್ಯ ಮತ್ತು ದಾರಿ ದೀಪದ ಬಗ್ಗೆ ಸಾರ್ವಜನಿಕರು ಅಳಲು ತೋಡಿಕೊಂಡರು. ಪಂಚಾಯಿತಿ ಅನುದಾನ ಅಸರ್ಮಪಕವಾಗಿ ಬರುತ್ತವೆ ಎಂದು ಪಂಚಾಯಿತಿ ಸದಸ್ಯರು ದೂರಿದರು.
ನೊಡೆಲ್ ಅಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಕಾರ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಪ್ರಶಾಂತ್ ಆಳ್ವ, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೊ, ಕಾರ್ಯದರ್ಶಿ ರವೀಂದ್ರ ಪೈ, ಪಿ.ಡಿ.ಓ ಅಧಿಕಾರಿ ಪ್ರೇಮ್ ಸಿಂಗ್, ಗ್ರಾಮ ಲೆಕ್ಕಿಗ ಮಂಜುನಾಥ್, ಮಹಿಳಾ ಕಲ್ಯಾಣ ಇಲಾಖೆ ಕಲ್ಪನಾ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಪುಷ್ಪ, ಆರೋಗ್ಯ ಸಹಾಯಕ ಬಿ. ಸುಂದರಿ, ಶರ್ಮಿಳಾ ಮತ್ತಿತರು ಉಪಸ್ಥಿತರಿದ್ದರು.

ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ಮೇರಿವೇಲ್ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಹೆತ್ತವರು ಮಕ್ಕಳಿಗೆ ಶಿಸ್ತು ಬದ್ಧ ಜೀವನದ ಬಗ್ಗೆ ತಿಳಿ ಹೇಳಬೇಕು. ಮಕ್ಕಳ ಆಸಕ್ತಿ ಆಕಾಂಕ್ಷೆಗಳ ಪ್ರಕಾರ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದು ಎಳತ್ತೂರು ಮಹಾಲಿಂಗೇಶ್ವರ ದೇವಳ ಆಡಳಿತ...

Close