ಕಟೀಲು ದೇವಳಕ್ಕೆ ರಾಜ್ಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಭೇಟಿ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಗುರುವಾರ ರಾಜ್ಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪರವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ರಾಜ್ಯದ ಹಿಂದುಳಿದ ವರ್ಗ ಆಯೋಗದಿಂದ ಜಾತಿವಾರು ಗಣತಿಯ ಸಮೀಕ್ಷೆಯನ್ನು ನಡೆಸಲಾಗುವುದು, ಹಿಂದುಳಿದ ವರ್ಗದ ಎಲ್ಲಾ ಜಾತಿಗಳ ಹಾಗೂ ಉಪಜಾತಿಗಳ ಸಂಸ್ಕಾರ ಮತ್ತು ಅವರ ಆಚಾರ ವಿಚಾರವನ್ನು ಅಧ್ಯಯನ ನಡೆಸಿ ಗ್ರಂಥದ ರೂಪದಲ್ಲಿ ಅದನ್ನು ಸುರಕ್ಷಿತವಾಗಿಡುವ ಕೆಲಸ ಇದರೊಂದಿಗೆ ನಡೆಯಲಿದೆ ಎಂದು ರಾಜ್ಯ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪ  ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಬಿಜೆಪಿಯಲ್ಲಿ ರಾಜಕೀಯ ಗೊಂದಲವಿದೆಯೇ ಹೊರತು, ಅಭಿವೃದ್ದಿಯಲ್ಲಿ ಎಂದೂ ಹಿನ್ನಡೆ ಇಲ್ಲ ಎಂದು ಹೇಳಿದ ಅವರು ಸದಾನಂದ ಗೌಡರಿಗಾಗಿ ಮುಖ್ಯಮಂತ್ರಿ ಸ್ಥಾನದ ಭದ್ರತೆಗಾಗಿ ವಿಧಾನ ಪರಿಷತ್ತಿನ ಸದಸ್ಯತನಕ್ಕೆ ರಾಜಿನಾಮೆ ನೀಡಿದ ಹಳೆಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಕಟೀಲು ಕ್ಷೇತ್ರದ ಬಗ್ಗೆ ಇಲ್ಲಿನ ಅಭಿವೃದ್ದಿ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಕ್ಷೇತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ನಗರದ ಬಿಜೆಪಿ ಶಕ್ತಿ ಕೇಂದ್ರದ ಉಪಾಧ್ಯಕ್ಷ ಶ್ರೀನಿವಾಸ ಶೇಟ್, ಯುವ ಮೋರ್ಚಾ ಕಾರ್ಯದರ್ಶಿ ಗುರುಚರಣ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಸದಸ್ಯ ಕೇಶವ ಉಲ್ಲಂಜೆ, ಇತರರು ಹಾಜರಿದ್ದರು.

Kinnigoli13121204

 

Kinnigoli13121206

Kinnigoli13121205

 

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಡಿ.16ರಂದು ಬಿಜೆಪಿ ಪ್ರಮುಖರ ಸಭೆ

ಕಿನ್ನಿಗೋಳಿ: ಬಿಜೆಪಿಯ ಪ್ರಮುಖರು ಡಿ.16ರಂದು ಬೆಳಿಗ್ಗೆ 9.30ಕ್ಕೆ ಕಿನ್ನಿಗೋಳಿಗೆ ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ಸದಾನಂದ ಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು,...

Close