ಕಿನ್ನಿಗೋಳಿಯಲ್ಲಿ ಡಿ.16ರಂದು ಬಿಜೆಪಿ ಪ್ರಮುಖರ ಸಭೆ

BJP

ಕಿನ್ನಿಗೋಳಿ: ಬಿಜೆಪಿಯ ಪ್ರಮುಖರು ಡಿ.16ರಂದು ಬೆಳಿಗ್ಗೆ 9.30ಕ್ಕೆ ಕಿನ್ನಿಗೋಳಿಗೆ ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ಸದಾನಂದ ಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್ ಮತ್ತಿತರ ಪ್ರಮುಖರು ಕಿನ್ನಿಗೋಳಿಗೆ ಬಂದು ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯುವ ಸಭೆಯುಲ್ಲಿ ಮೂಲ್ಕಿ ಮೂಡುಬಿದ್ರೆ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೂಲ್ಕಿ ಮೂಡುಬಿದ್ರೆ ಕ್ಷೇತ್ರದ ಬಿಜೆಪಿ ಅಧ್ಯಕ್ಷೆ ಕಸ್ತೂರಿ ಪಂಜ ತಿಳಿಸಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಬೆಸ್ಟ್ ಕ್ಲಬ್

ಕಿನ್ನಿಗೋಳಿ:  ಪುತ್ತೂರಿನಲ್ಲಿ ನಡೆದ ರೋಟರಾಕ್ಟ್ ಕೆನರಾ ವಲಯ ಸಮ್ಮೇಳನದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಬೆಸ್ಟ್ ಕ್ಲಬ್ ಸಹಿತ 17 ಪಶಸ್ತಿಗಳನ್ನು ಪಕೊಂಡಿತು. ನಿಯೋಜಿತ ಜಿಲ್ಲಾ ಗವರ್ನರ್ ಡಾ| ಬಾಸ್ಕರದಾಸ್, ರೋಟರಾಕ್ಟ್ ಜಿಲ್ಲಾ ಸಭಾಪತಿ...

Close