ಜೇಸಿಐ: ವಿದ್ಯಾರ್ಥಿಗಳಿಗೆ ರಕ್ತ ವರ್ಗೀಕರಣ ಮಾಹಿತಿ

Pundalika Marathe

ಬೆಳ್ಮಣ್:- ಜೇಸಿಐ ಬೆಳ್ಮಣ್ ಘಟಕ, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ವತಿಯಿಂದ ಸಂತ ಜೋಸೆಫ್ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ರಕ್ತದ ಗುಂಪು, ವರ್ಗೀಕರಣ ಹಾಗೂ ರಕ್ತದಾನದ ಬಗ್ಗೆ ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಡಿ.ಟಿ.ಪಟಗಾರ್ ಮಾಹಿತಿ ನೀಡಿದರು. ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞ ಸುದರ್ಶನ್ ವಿದ್ಯಾರ್ಥಿಗಳ ರಕ್ತದ ವರ್ಗೀಕರಣ ಹಾಗೂ ಗುಂಪುಗಳ ಪರಿಚಯ ಮಾಡಿಸಿದರು. ವಿದ್ಯಾರ್ಥಿಗಳಿಗೆ ಜೇಸಿಐ ರಕ್ತದ ಗುಂಪು ಗುರುತು ಚೀಟಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷರಾಗಿ ಪುನಾರು ವಹಿಸಿದ್ದರು. ಸಂತ ಜೋಸೆಫ್ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೊನಿಕಾ ಜೇಸಿಯ ಕಾರ್ಯವನ್ನು ಶ್ಲಾಘಿಸಿದರು. ರಘುನಾಥ ನಾಯಕ್ ಸ್ವಾಗತಿಸಿದರು. ಸರ್ವಜ್ಞ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ವಿ ಪೂಜಾರಿ, ಜೇಸಿ ಮಾಜಿ ಅಧ್ಯಕ್ಷ ಸತೀಶ್, ರವಿರಾಜ್, ಶಿಕ್ಷಕ ವಿನ್ಸೆಂಟ್ ಪಿಂಟೊ, ಶಿಕ್ಷಕಿ ಸಿಸ್ಟರ್ ಉಷಾಸ್ಟೆಲ್ಲಾ ಡಿಸೋಜ, ದೈಹಿಕ ಶಿಕ್ಷಣ ಶಿಕ್ಷಕ ಹರ್ಷೇಂದ್ರಕುಮಾರ್ ಜೈನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಜೀವ ಪೂಜಾರಿ ಧನ್ಯವಾದವಿತ್ತರು.

Kinnigoli-14121202

 

Comments

comments

Leave a Reply

Read previous post:
ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣಾ ತರಬೇತಿ

Pundalika Marathe ಬೆಳ್ಮಣ್: ನಂದಳಿಕೆ ಅಬ್ಬನಡ್ಕ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮನ್ ವತಿಯಿಂದ ಶ್ರೀಲಕ್ಷ್ಮೀಜನಾರ್ದನ ಫ್ರೌಢ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ನಿವಾರಣೆ,...

Close