ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐ ಉದ್ಯಮಶೀಲತಾ ಶಿಬಿರ

ಕಿನ್ನಿಗೋಳಿ: ಉದ್ಯಮಶೀಲತಾ ಪ್ರೇರಣಾ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸ್ವಉದ್ಯೋಗ ಬಗ್ಗೆ ಜಾಗೃತಿ ಮೂಡಿ ತಮ್ಮ ಜೀವನದಲ್ಲಿ ಅವಕಾಶ ಸೃಷ್ಠಿಸಿಕೊಂಡು ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಬಹುದು ಮತ್ತು ಇದಕ್ಕಾಗಿ ವಿದ್ಯಾರ್ಥಿಗಳು ದೃಡವಿಶ್ವಾಸ, ಕಠಿಣ ಪರಿಶ್ರಮ ಮತ್ತು ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕು. ಈಗಿನ ಯುವ ಶಕ್ತಿಯನ್ನು ಸಂಘಟಿಸಿ ಅವರನ್ನು ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಂಡು ಹೋಗುವ ತರಬೇತಿಯನ್ನು ನೀಡುವಲ್ಲಿ ಉದ್ಯಮ ಶೀಲತಾ ಘಟಕಗಳು ಕಾರ್ಯನಿರ್ವಹಿಸಬೇಕು. ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ತಾಂತ್ರಿಕ ವಿದ್ಯಾಲಯದ ಪ್ರಿನ್ಸಿಪಾಲ್ ಡಾ| ಎನ್. ನಿರಂಜನ್ ಚಿಪ್ಲೂಂಕರ್ ಹೇಳಿದರು.

ತೋಕೂರು ತಪೋವನ ರಾಮಕೃಷ್ಣ ಪೂಂಜಾ ಐ.ಟಿ.ಐ ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ತಾಂತ್ರಿಕ ವಿದ್ಯಾಲಯದ ಉದ್ಯಮಶೀಲತಾ ಘಟಕ ಇದರ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಗುರುವಾರ ನಡೆದ ಎರಡು ದಿನಗಳ ಉದ್ಯಮಶೀಲತಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಫ್ರಿಸಿಶನ್ ಫಾಸ್ಟನರ್ಸ್ ಮಾಲಕ ದಿನಕರ್ ಮುಕ್ಕ, ನಿಟ್ಟೆ ಎನ್.ಎಂ.ಎ.ಎಂ.ಐ.ಟಿ. ವೈಸ್ ಪ್ರಿನ್ಸಿಪಾಲ್ ಡಾ| ಐ.ಆರ್. ಮಿತ್ತಂತಾಯ, ಉಪಸ್ಥಿತರಿದ್ದರು. .
ಪ್ರೊ| ಉದಯಕುಮಾರ್ ಸ್ವಾಗತಿಸಿ ವಿಶ್ವನಾಥ್ ರಾವ್ ಧನ್ಯವಾದವಿತ್ತರು. ದಯಾನಂದ ಲಾಗ್ವಾಣ್‌ಕರ್ ನಿರೂಪಿಸಿದರು.

Kinnigoli-15121201

ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ತಾಂತ್ರಿಕ ವಿದ್ಯಾಲಯದ ಪ್ರಿನ್ಸಿಪಾಲ್ ಡಾ| ಎನ್. ನಿರಂಜನ್ ಚಿಪ್ಲೂಂಕರ್ ಶಿಬಿರ ಉದ್ಘಾಟಿಸಿದರು.

Comments

comments

Leave a Reply

Read previous post:
ಜೇಸಿಐ: ವಿದ್ಯಾರ್ಥಿಗಳಿಗೆ ರಕ್ತ ವರ್ಗೀಕರಣ ಮಾಹಿತಿ

Pundalika Marathe ಬೆಳ್ಮಣ್:- ಜೇಸಿಐ ಬೆಳ್ಮಣ್ ಘಟಕ, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ವತಿಯಿಂದ ಸಂತ ಜೋಸೆಫ್ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ರಕ್ತದ ಗುಂಪು, ವರ್ಗೀಕರಣ...

Close