ಬಿ.ಜೆಪಿ. ಸಾಮೂಹಿಕ ನಾಯಕತ್ವದ ಪಕ್ಷ ; ಡಿ.ವಿ.ಸದಾನಂದ ಗೌಡ

ಕಿನ್ನಿಗೋಳಿ : ಬಿ.ಜೆಪಿ. ವ್ಯಕ್ತಿಗತ ಪಕ್ಷವಲ್ಲ ಸಾಮೂಹಿಕ ನಾಯಕತ್ವದ ಪಕ್ಷವಾಗಿದೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಇದೆ ಎಂದು ಹೇಳುವ ಕಾಂಗ್ರೆಸ್‌ನಲ್ಲಿ ಕೃಷ್ಣರನ್ನು ಸಿಂಗಾಪುರಕ್ಕೆ, ಖರ್ಗೆಯನ್ನು ದೆಹಲಿಯಲ್ಲಿಯೇ ಬಿಟ್ಟಿರುವುದು ಹಾಗೂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಒಳ ಜಗಳ ಜನಜನಿತ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಭಾನುವಾರ ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದ್ವೇಷ, ಸೇಡಿನ ರಾಜಕಾರಣ ಕರ್ನಾಟಕದಲ್ಲಿ ನಡೆಯಬಾರದು ಇದು ರಾಜಕೀಯಕ್ಕೆ ತಕ್ಕುದ್ದಲ್ಲ. ಸಂವಿದಾನ ಬದ್ಧ, ನ್ಯಾಯಾಲಯದ ತೀರ್ಮಾನಕ್ಕೆ ತಾನು ಬದ್ಧನಾಗಿದ್ದೇನೆ ಸುಳ್ಳು ಹೇಳಿ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದರು.
ಬಿಜೆಪಿಯ ಮೇಲೆ ಗೂಬೆ ಕೂರಿಸಿ ಕಾಂಗ್ರೆಸ್ ಅಧಿಕಾರ ಬರುವುದು ಕಷ್ಟ ಸಾಧ್ಯ. ಅಧಿವೇಶನದಲ್ಲಿ ನಂಜುಡಪ್ಪ ವರದಿ, ಹೈದ್ರಾಬಾದ್‌ನ ಸ್ಥಾನಮಾನ, ಕಾವೇರಿ ವಿವಾದ, ಗೋ ಮಸೂದೆ ಮಂಡನೆಯ ಬಗ್ಗೆ ಚರ್ಚೆ ನಡೆಸದ ಕಾಂಗ್ರೆಸ್ ಅಧಿಕಾರ ಪಡೆಯಲು ನೈತಿಕತೆ ಬಗ್ಗೆ ವಾಖ್ಯಾನ ಮಾಡುತ್ತಿರುವುದು ವಿಪರ‍್ಯಾಸ.
ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಅಭಿವೃದ್ದಿಗಳು ಕುಂಠಿತವಾಗಿದೆ. ಸರಿಯಾದ ಸವಲತ್ತುಗಳನ್ನು ಪಡೆಯಲು ಸರ್ಕಾರದ ಗಮನ ಸೆಳೆದು ಕಾರ್ಯವ್ಯಾಪ್ತಿಗೆ ತರುವಲ್ಲಿ ಸಂಪೂರ್ಣವಾಗಿ ಹಿನ್ನಡೆಯಾಗಿರುವ ಈ ಕ್ಷೇತ್ರದಲ್ಲಿ ಈ ಬಾರಿ ನಿಜವಾಗಿಯೂ ಬಿಜೆಪಿ ಬಾವುಟ ಹಾರಲಿದೆ.

Kinnigoli-16121205

ಡಿ.30ಕ್ಕೆ ಅಭ್ಯರ್ಥಿಗಳ ಪಟ್ಟಿ:
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದು ಡಿಸೆಂಬರ್ 30 ರಂದು ಅಭ್ಯರ್ಥಿಗಳ ಪ್ರಥಮ ಪಟ್ಟಿ ತಯಾರಿಸಿ ಜನವರಿ 15 ರ ಒಳಗೆ ಪ್ರಥಮ ಹಂತದ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ಬಿಜೆಪಿ ಆಡಳಿತ ಅವಧಿಯಲ್ಲಿ ಚುನಾವಣೆ ಪ್ರಣಾಳಿಕೆಯಿದ್ದಂತೆ ಅಭಿವೃದ್ದಿ ಕಾರ್ಯಗಳು ನಡೆದಿವೆ. ಈ ಕಾರ್ಯಗಳೇ ನಮ್ಮ ಸಾಧನೆ ನಮ್ಮಲ್ಲಿ ವ್ಯಕ್ತಿ ಸಾಧನೆಕ್ಕಿಂತ ಪಕ್ಷದ ಸಾಧನೆ ಪ್ರಾಮುಖ್ಯ. ನಮ್ಮ ಸಕಾಲ ಯೋಜನೆಯನ್ನು ಕೇಂದ್ರ ಸರಕಾರವೂ ಜಾರಿ ಮಾಡವ ಆಲೋಚನೆಯಲ್ಲಿದೆ.

ಬಿಜೆಪಿಯಲ್ಲಿ ಎಂದಿಗೂ ಅಭ್ಯರ್ಥಿಗಳ ಕೊರತೆ ಕಂಡು ಬಂದಿಲ್ಲ ಪ್ರತೀ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಇದ್ದಾರೆ, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಇರುವುದರಿಂದ ರಾಜ್ಯದಲ್ಲಿ ಹಾಲಿ ಶಾಸಕರಿಗೂ ಅಭ್ಯರ್ಥಿಯ ಆಯ್ಕೆಗೆ ಇದು ಅನ್ವಯಿಸುತ್ತದೆ. ಅಲ್ಲದೇ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶದಿಂದ ಇಡೀ ರಾಷ್ಟ್ರಮಟ್ಟದಲ್ಲಿ ರಾಜಕೀಯ ಬದಲಾವಣೆ ಆಗುತ್ತದೆ ಸಮೀಕ್ಷೆಯನ್ನು ನಂಬುವುದಿಲ್ಲ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಇನ್ನೂ ನಿರ್ಮಾಣವಾಗಿಲ್ಲ ಎಂದು ಹೇಳಿದರು.

ಕಟೀಲು ಕ್ಷೇತ್ರದ ಅಭಿವೃದ್ದಿ;
ಹೋಟೆಲ್ ಮತ್ತು ಇನ್ನಿತರ ತ್ಯಾಜ್ಯ ನೀರು ನಂದಿನಿ ನದಿಗೆ ಬಿಡುತ್ತಿರುವುದು ಗಮನಕ್ಕೆ ಬಂದಿದೆ, ಇಲ್ಲಿ ನಿರ್ಮಾಣವಾಗಲಿರುವ ಯುಜಿಡಿ ಯೋಜನೆಯ ಒಳಚರಂಡಿ ವ್ಯವಸ್ಥೆಯೇ ಇದಕ್ಕೆಲ್ಲಾ ಪರಿಹಾರ. ಮಂಜೂರಾತಿ ದೊರೆತಿದ್ದು ಕೂಡಲೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು, ಪೆರ್ಮುದೆಯಿಂದ ಸಂಕಲಕರಿಯವರೆಗೆ ರಸ್ತೆ ವಿಸ್ತರಣೆ ನಡೆದು, ಡಾಮರೀಕರಣ ೩ ಕೋಟಿ ೨೩ ಲಕ್ಷ ವೆಚ್ಚದಲ್ಲಿ ಮುಂದಿನ ತಿಂಗಳು ಕಾಮಗಾರಿ ಆರಂಭವಾಗಲಿದೆ. ಕಟೀಲಿನ ಯೋಜನೆಗಳು ತಾಂತ್ರಿಕ, ಕಾನೂನು ವ್ಯವಸ್ಥೆಯಿಂದಾಗಿ ಅಭಿವೃದ್ದಿ ಕುಂಠಿತವಾಗಿದೆ. ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಕ್ಷೇತ್ರದ ಅಧ್ಯಕ್ಷೆ ಕಸ್ತೂರಿ ಪಂಜ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಕೆ.ಭುವನಾಭಿರಾಮ ಉಡುಪ, ಜಗದೀಶ ಅಧಿಕಾರಿ, ಕಾರ್ಯದರ್ಶಿ ಸಂಜೀವ ಮಠಂದೂರು, ಕೆ.ಆರ್.ಪಂಡಿತ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್, ಆದರ್ಶ ಶೆಟ್ಟಿ ಎಕ್ಕಾರು, ಮೂಡಬಿದಿರೆ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಎಂ.ಆರ್. ಪೂಂಜಾ ಐ.ಟಿ.ಐ. ಕಾಲೇಜು ಶ್ರಮದಾನ

ಕಿನ್ನಿಗೋಳಿ : ಎಂ.ಆರ್. ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು ,ತಪೋವನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು ೯೦ ಸ್ವಯಂ ಸೇವಕರು ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ...

Close