ಮೆನ್ನಬೆಟ್ಟು ಗ್ರಾಮ ಸಭೆ : ತ್ಯಾಜ್ಯ ಸಮಸ್ಯೆ

Kinnigoli-16121201

ಕಿನ್ನಿಗೋಳಿ : ಶುಕ್ರವಾರ ನಡೆದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಬೆಯಲ್ಲಿ ತ್ಯಾಜ್ಯದ ಸಮಸ್ಯೆ ಬಗ್ಗೆ ಚರ್ಚೆಯಾಯಿತು. ಕಟೀಲು ದೇವಳದ ಹಾಗೂ ಇನ್ನಿತರ ತ್ಯಾಜ್ಯಗಳನ್ನು ನಂದಿನಿ ನದಿಗೆ ಬಿಡಲಾಗುತ್ತಿದೆ. ಈ ನದಿಯಲ್ಲಿ ಬಾವಿ ಕೊರೆದಿದ್ದು, ಈ ಬಾವಿಯಿಂದಲೇ ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ಮುಂತಾದೆಡೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ತ್ಯಾಜ್ಯಗಳನ್ನು ನದಿಗೆ ಬಿಡಬಾರದು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಉತ್ತರ ನೀಡಿದ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಂದ್ರಪ್ರಭಾ ದೇವಳಕ್ಕೆ ದೇಗುಲಕ್ಕೆ ನೋಟೀಸ್ ನೀಡಿದ್ದೇವೆ. ದೇಗುಲದ ಆಡಳಿತ ಡ್ರೈನೇಜ್ ಮಾಡುವ ಯೋಜನೆಯನ್ನು ಆದಷ್ಟು ಬೇಗ ಮಾಡುತ್ತೇವೆ ಎಂದು ತಿಳಿಸಿದೆ. ಪರಿಸರದ ಬಾವಿಗಳ ನೀರನ್ನು ಬೇಕಾದರೆ ಪರೀಕ್ಷಿಸಿ, ನೀರಿನ ಗುಣಮಟ್ಟದ ವರದಿ ನೀಡುತ್ತೇವೆ ಎಂದು ತಿಳಿಸಿದರು.
ಘನ ತ್ಯಾಜ್ಯ ಸಮಸ್ಯೆಯ ಪ್ರಶ್ನೆಗೆ ಭಗೀರಥ ಸಂಸ್ಥೆಯ ಸಹಕಾರದಿಂದ ಮುಂದಿನ ವಾರದಿಂದ ಕೋಳಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಪ್ರಾರಂಭಿಸಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು.
ಕೊಡೆತ್ತೂರು ಮುಕ್ಕ ರಸ್ತೆ ರಿಪೇರಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕೆಮ್ಮಡೆಯ ಗೋಪಾಲ್‌ರಿಗೆ ೨೦೦೯ರಲ್ಲಿ ಕುಟೀರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಮಂಜೂರಾಗಿದ್ದರೂ ಇನ್ನೂ ಸಂಪರ್ಕ ನೀಡಿಲ್ಲ ಎಂಬ ದೂರಿಗೆ ತಾಂತ್ರಿಕ ಸಮಸ್ಯೆಯಿದ್ದು ಮೂರು ತಿಂಗಳೊಳಗೆ ಸಂಪರ್ಕ ಮಾಡಲಾಗುವುದು ಎಂದು ಇಲಾಖಾಧಿಕಾರಿ ಉತ್ತರಿಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟುವ ಜಾಹೀರಾತು ಇತ್ಯಾದಿ ಬ್ಯಾನರ್‌ಗಳಿಗೆ ಶುಲ್ಕದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪಿಡಿಒ ಗಣೇಶ ಬಡಿಗೇರ ಎಲ್ಲರಿಗೂ ಒಂದೇ ರೀತಿಯ ಶುಲ್ಕ ವಿಧಿಸಲಾಗುತ್ತದೆ ಸ್ಪಷ್ಟನೆ ನೀಡಿದರು.
ಜಲಾನಯನ ಇಲಾಖಾಧಿಕಾರಿ ಯುವರಾಜ್ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ದನ್ ಕಿಲೆಂಜೂರು, ತಾ.ಪಂ.ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಅಧಿಕಾರಿಗಳಾದ ನಾರಾಯಣಾಚಾರಿ, ಸತ್ಯಶಂಕರ್ ಮತ್ತಿತರರಿದ್ದರು.

Comments

comments

Leave a Reply

Read previous post:
ತೋಕೂರು ರಾಮಕೃಷ್ಣ ಪೂಂಜಾ ಐ.ಟಿ.ಐ ಉದ್ಯಮಶೀಲತಾ ಶಿಬಿರ

ಕಿನ್ನಿಗೋಳಿ: ಉದ್ಯಮಶೀಲತಾ ಪ್ರೇರಣಾ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸ್ವಉದ್ಯೋಗ ಬಗ್ಗೆ ಜಾಗೃತಿ ಮೂಡಿ ತಮ್ಮ ಜೀವನದಲ್ಲಿ ಅವಕಾಶ ಸೃಷ್ಠಿಸಿಕೊಂಡು ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಬಹುದು ಮತ್ತು ಇದಕ್ಕಾಗಿ ವಿದ್ಯಾರ್ಥಿಗಳು ದೃಡವಿಶ್ವಾಸ, ಕಠಿಣ...

Close