ನೂತನ ರಜತ ಪಲ್ಲಕ್ಕಿ ಸಮರ್ಪಣೆ

ತೋಕೂರು : ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರದಲ್ಲಿರುವ ಸಿಬ್ಬಂದಿಗಳ ಕೊರತೆಯನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಗ್ರಾಮದ ಅಭಿವೃದ್ದಿಯಲ್ಲಿ ಧಾರ್ಮಿಕ ಕೇಂದ್ರಗಳೇ ಮುಖ್ಯವಾಗಿವೆ. ಅತಿ ಪುರಾತನ ತೋಕೂರು ದೇವಸ್ಥಾನಕ್ಕೂ ಸರಕಾರದಿಂದ ಸಹಾಯ ನೀಡಲಾಗುವುದು ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶನಿವಾರ ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೂತನ ರಜತ ಪಲ್ಲಕ್ಕಿ ಸಮರ್ಪಣೆ ಮತ್ತು ಜೀರ್ಣೋದ್ಧಾರ ನಿಧಿ ಸಂಚಯನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ.ಸಾ.ಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮುಲ್ಕಿ-ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ದೇವಳದ ಆಡಳಿತ ಮೊಕ್ತೇಸರ ತೋಕೂರು ಗುತ್ತು ಭಾಸ್ಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಟಿ.ವ್ಯಾಸರಾವ್ ಮಜಿಗುತ್ತು, ಅರ್ಚಕ ಶಿಬರೂರು ಗೋಪಾಲಕೃಷ್ಣ ತಂತ್ರಿ, ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್, ಪದ್ಮನಾಭ ಆಚಾರ್ಯ, ಉತ್ರೊಂಜಿ ಗುತ್ತು ಭುಜಂಗ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಉಪಸ್ಥಿರಿದ್ದರು.
ರಜತ ಪಲ್ಲಕ್ಕಿ ರಚಿಸಿದ ಅಶ್ವಥ್ಥಪುರ ಬಾಬುರಾಯ ಆಚಾರ್ಯ ಹಾಗೂ ಚೇಳ್ಳಾಯರು ಉಮೇಶ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಹಳೆಯಂಗಡಿಯ ಶ್ರೀನಿವಾಸ ಕಲಾಮಂದಿರದಿಂದ ರಜತ ಪಲ್ಲಕ್ಕಿಯನ್ನು ತೋಕೂರು ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ತರಲಾಯಿತು.

Kinnigoli-16121202

Kinnigoli-16121206
Kinnigoli-16121207
Kinnigoli-16121210

Kinnigoli-16121209

Kinnigoli-16121208

Kinnigoli-16121211

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾಮ ಸಭೆ : ತ್ಯಾಜ್ಯ ಸಮಸ್ಯೆ

ಕಿನ್ನಿಗೋಳಿ : ಶುಕ್ರವಾರ ನಡೆದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಬೆಯಲ್ಲಿ ತ್ಯಾಜ್ಯದ ಸಮಸ್ಯೆ ಬಗ್ಗೆ ಚರ್ಚೆಯಾಯಿತು. ಕಟೀಲು ದೇವಳದ ಹಾಗೂ ಇನ್ನಿತರ ತ್ಯಾಜ್ಯಗಳನ್ನು ನಂದಿನಿ ನದಿಗೆ ಬಿಡಲಾಗುತ್ತಿದೆ. ಈ...

Close