ಕೊಲ್ಲೂರು: ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ

ಕಿನ್ನಿಗೋಳಿ: ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮೂಡಬಿದಿರೆ, ಸರಕಾರ ಆರ್ಯುವೇದ ಚಿಕಿತ್ಸಾಲಯ ಕೊಲ್ಲೂರು, ಭಾರತಿಯ ಕೆಥೋಲಿಕ್ ಯುವ ಸಂಚಲನ ಬಳಕುಂಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲೂರು-ಕವತ್ತಾರು ಒಕ್ಕೂಟದ ಜಂಟೀ ಆಶ್ರಯದಲ್ಲಿ ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ ಇತ್ತಿಚೆಗೆ ಕೊಲ್ಲೂರು ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.
ಪಡುಬಿದ್ರಿಯ ಡಾ| ಎನ್. ಟಿ. ಅಂಚನ್ ಶಿಬಿರ ಉದ್ಘಾಟಿಸಿದರು. ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಆಡಳಿತಧಿಕಾರಿ ಸ್ಮಿತಾ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಬಳಕುಂಜೆ ಚಚ್ ಧರ್ಮಗುರು ಫಾ| ಹಿಲರಿ ಲೋಬೊ, ವೈದ್ಯಾಧಿಕಾರಿ ಡಾ| ಮುರಳೀಧರ್, ಜಿ.ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ಗ್ರಾ.ಪಂ. ಅಧ್ಯಕ್ಷೆ ಗೀತಾ ಆರ್ ಅಮೀನ್, ನೋಟರಿ ಬಿಪಿನ್ ಪ್ರಸಾದ್ ಶಾಲಾ ಸಮಿತಿ ಅಧ್ಯಕ್ಷ ರಾಜು ಸಾಲ್ಯಾನ್,ಐತಪ್ಪ ಸಾಲ್ಯಾನ್, ಭಾರತಿಯ ಕೆಥೋಲಿಕ್ ಯುವ ಸಂಚಲನ ಬಳಕುಂಜೆ ಅಧ್ಯಕ್ಷೆ ಮೆಲ್ರೀಡಾ ರೋಡ್ರಿಗಸ್, ಪ್ರಾಚಾರ್ಯೆ ಡಾ| ವನಿತಾ ಶೆಟ್ಟಿ ಉಪಸ್ಥಿತರಿದ್ದರು.

Kinnigoli-17121202

Comments

comments

Leave a Reply

Read previous post:
ಕಿನ್ನಿಗೋಳಿ ಸಂತ ವಿನ್ಸೆಂಟ್ ಪಾವ್ಲ್ – ಸ್ವರ್ಣ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಚರ್ಚ್‌ನ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮವು ಕಿನ್ನಿಗೋಳಿ ಚರ್ಚ್‌ನಲ್ಲಿ ನಡೆಯಿತು. ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಫಾ| ಹೆನ್ರಿ ಡಿ’ಸೋಜ,...

Close