ಮಂಗಳೂರು ವಿ.ವಿ. ಟೇಬಲ್ ಟೆನ್ನಿಸ್ ತರಬೇತಿ ಆಯ್ಕೆ ಶಿಬಿರ

ಕಿನ್ನಿಗೋಳಿ : ಪೊಂಪೈ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಮತ್ತು ಮಂಗಳೂರು ವಿ.ವಿ.ಯ ಸಂಯುಕ್ತ ಆಶ್ರಯದಲ್ಲಿ ವಿ.ವಿ. ಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಆಯ್ಕೆ ಮತ್ತು ತರಬೇತಿ ಶಿಬಿರ ಬುಧವಾರ ಐಕಳ ಪೊಂಪೈ ಕಾಲೇಜಿನಲ್ಲಿ ಸಂಸ್ಥೆಯ ಸಂಚಾಲಕ ವಂ. ರೆ. ಫಾ. ಪೌಲ್ ಪಿಂಟೋ ಉದ್ಘಾಟಿಸಿದರು

ಐಕಳ ಪೊಂಪೈ ಕಾಲೇಜು ಪ್ರಾಚಾರ್ಯ ಪ್ಯಾಟ್ರಿಕ್ ಮಿನೇಜಸ್, ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಜೇಮ್ಸ್ ಒಲಿವರ್, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಜಗದೀಶ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ವಿ.ವಿ.ಯ ದ.ಕ., ಕೊಡಗು ಮತ್ತು ಉಡುಪಿ ಜಿಲ್ಲೆಗಳ ಕ್ರೀಡಾಳುಗಳು ಭಾಗವಹಿಸುತ್ತಿದ್ದು ಆಯ್ಕೆಯಾದವರು ಮಂಗಳೂರು ವಿ.ವಿ.ಯನ್ನು ಕಣ್ಣೂರಿನಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

Kinnigoli-22121201

Comments

comments

Leave a Reply

Read previous post:
ಗುತ್ತಕಾಡು ಶಾಲಾ ರಂಗಮಂಟಪ ಉದ್ಘಾಟನೆ

ಕಿನ್ನಿಗೋಳಿ: ದ.ಕ ಜಿಲ್ಲಾ ಪಂಚಾಯಿತಿಯ ಅನುದಾನದಿಂದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಯಲು ರಂಗ ಮಂಟಪವನ್ನು ಶುಕ್ರವಾರ ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ರತ್ನಾಕರ ಸುವರ್ಣ...

Close