ಐಕಳ ನೀತಿ ಸದನದಲ್ಲಿ ಕ್ರಿಸ್‌ಮಸ್ ಆಚರಣೆ

ಕಿನ್ನಿಗೋಳಿ: ಪ್ರೀತಿ-ನೀತಿ ಟ್ರಸ್ಟ್, ಸಂಜೀವಿನಿ ಮತ್ತು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಹಯೋಗದಲ್ಲಿ ಕ್ರಿಸ್‌ಮಸ್ ಮತ್ತು ಹೊಸವರ್ಷ ಮಂಗಳವಾರ ಆಚರಿಸಲಾಯಿತು.
ಕನ್ಸೆಟ್ಟಾ ಆಸ್ಪತ್ರೆ ಮೇಲ್ವಿಚಾರಕಿ ಭಗಿನಿ ಸೋಫಿಯಾ ಕ್ರಿಸ್‌ಮಸ್ ಗೋದಲಿ ಉದ್ಘಾಟಿಸಿದರು. ಪ್ರೀತಿ-ನೀತಿ ಟ್ರಸ್ಟ್ ಮುಖ್ಯಸ್ಥೆ ಜೂಡಿತ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿದ್ದರು. ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್ ಪ್ರಾಸ್ತಾವನೆಗೈದರು. ಐಕಳ ಗ್ರಾ. ಪಂ. ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್ ಶೆಟ್ಟಿಗಾರ್, ದಿನೇಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ಕನ್ಸೆಟ್ಟಾ ಆಸ್ಪತ್ರೆಯ ದಾದಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು, ಎಮ್. ಎಸ್. ಡಬ್ಲು ವಿದ್ಯಾರ್ಥಿ ಸವಿತಾ ಸ್ವಾಗತಿಸಿದರು, ಪ್ರೀತಿ ವಂದಿಸಿದರು.

Kinnigoli27121201

 

Comments

comments

Leave a Reply

Read previous post:
Christmus Cribs – Kinnigoli

Kinnigoli Church Pakshikere Church Damaskatte Kirem Church Kateel Church Padmanoor Christmus Crib Battakodi Lawrence Christmus Crib

Close