ಗೋವಿಂದದಾಸ ಕಾಲೇಜು ವಾರ್ಷಿಕ ವಿಶೇಷ ಶಿಬಿರ

ಕಿನ್ನಿಗೋಳಿ : ಅಚಲ ಮನಸ್ಸಿನಿಂದ ಸಫಲ ಪ್ರಯತ್ನದ ಮೂಲಕ ಜೀವನ ಕೌಶಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸಿಕೊಡಬಲ್ಲದು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಉಪಯುಕ್ತವಾಗಿದ್ದು, ಸ್ವಯಂಸೇವಕರು ಆತ್ಮವಿಶ್ವಾಸದ ಆಗರಗಳಾಗಬೇಕಾಗಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಸುರತ್ಕಲ್ ಗೋವಿಂದದಾಸ ಕಾಲೇಜಿನ ರಾ.ಸೇ.ಯೋ. ಘಟಕವು ಕೊಕುಡೆ ದ.ಕ.ಜಿಲ್ಲಾ ಪ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಪಿ.ರಂಜನ್ ರಾವ್ ಮಾತನಾಡಿ ರಾ.ಸೇ.ಯೋ. ಸ್ವಯಂ ಸೇವಕರು ಗ್ರಾಮಸ್ಥರ ಅಳಲುಗಳನ್ನು ಅರಿತುಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿಸುವ ವಾಹಿನಿಗಳಾಗಬೇಕಾಗಿದೆ, ಗ್ರಾಮ ಭಾರತದ ನೈಜ ಚಿತ್ರಣ ನಮ್ಮ ಯುವಜನರಿಗೆ ಲಭ್ಯವಾಗಬೇಕಾಗಿದೆ ಎಂದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಶಿಬಿರವನ್ನು ಉದ್ಘಾಟಿಸಿದರು. ಗೋವಿಂದದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ರಾಜಮೋಹನ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕೆಮ್ರಾಲ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಂಧ್ಯಾ ಯನ್.ಹೆಗ್ಡೆ, ದ.ಕ.ಜಿ.ಪ.ಹಿ.ಪ್ರಾ ಶಾಲೆ ಕೊಕುಡೆ ಮುಖ್ಯೋಪಾಧ್ಯಾಯಿನಿ ಕೆ.ಎಸ್.ವಿಜಯಲಕ್ಷ್ಮೀ, ರಾ.ಸೇ.ಯೋ ಜನಾಧಿಕಾರಿ ಪ್ರೊ.ಹರೀಶ್ ಆಚಾರ್ಯ, ಪ್ರೊ.ವಾಮನ ಕಾಮತ್, ಕೆಮ್ರಾಲ್‌ನ ಗ್ರಾಮ ಪಂಚಾಯಿತಿ ಸದಸ್ಯೆ ಸುಮಲತಾ, ರಾ.ಸೇ.ಯೋ.ಕಾರ್ಯದರ್ಶಿ ರಾಜಶೇಖರ್, ಮಹೇಶ್, ಕಾಲೇಜು ವಾಣಿಜ್ಯ ವಿಭಾಗ ಡೀನ್ ಪ್ರೊ.ರಮೇಶ ಕುಳಾಯಿ, ವಿಜ್ಞಾನ ವಿಭಾಗ ಡೀನ್ ಪ್ರೊ. ದೇವಪ್ಪ ಕುಳಾಯಿ, ಭಾಷಾ ವಿಭಾಗ ಡೀನ್ ಪ್ರೊ.ಕೃಷ್ಣಮೂರ್ತಿ, ರೆಡ್‌ಕ್ರಾಸ್ ವಿಭಾಗ ಸಂಯೋಜಕ ಪ್ರೊ.ರಮೇಶ್ ಭಟ್, ಎಸ್.ಜೆ.ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಘಟಕದ ಕಾರ್ಯದರ್ಶಿ ದೀಪಾ ಸ್ವಾಗತಿಸಿ, ಸುಸ್ಮಿತಾ ಆಚಾರ್ಯ ವಂದಿಸಿದರು. ಭವ್ಯಾ ಕಾರ್ಯಕ್ರಮ ನಿರೂಪಿಸಿದರು.

Kinnigoli-28121203

Comments

comments

Leave a Reply

Read previous post:
ಗುತ್ತಕಾಡು-ಫ್ರೆಂಡ್ಸ್ ಕ್ಲಬ್ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ: ಗುತ್ತಕಾಡು ಶಾಂತಿನಗರ ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್(ರಿ)2013-14ನೇ ಸಾಲಿನ ಅಧ್ಯಕ್ಷರಾಗಿ ತಾಹೀರ್ ನಕಾಶ್ ಗುತ್ತಕಾಡು ಆಯ್ಕೆಯಾದರು. ಪದಾಧಿಕಾರಿಗಳು ಗೌರವಾಧ್ಯಕ್ಷ ಶಶಿಕಾಂತ್ ರಾವ್, ಉಪಾಧ್ಯಕ್ಷ ನೂರುದ್ಧಿನ್, ಕಾರ್ಯದರ್ಶಿ ತೌಸೀಫ್,...

Close