ಕಿನ್ನಿಗೋಳಿ : ಕ್ರಿಸ್‌ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ, ಪವಿತ್ರ ಹೃದಯವಾಳೆ ಹಾಗೂ ಬಾಲಯೇಸು ವಾಳೆ ಜಂಟೀ ಸಹಬಾಗಿತ್ವದಲ್ಲಿ ಸರ್ವಧರ್ಮ ಕ್ರಿಸ್‌ಮಸ್ ಸೌಹಾರ್ದ ಕೂಟ ಕಿನ್ನಿಗೋಳಿ ಕಂಬಳ ಪ್ರಕಾಶ್ ಸೆರಾವೊ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭ ಸಮಾಜ ಸೇವಕರಾದ ದೇವದಾಸ ಶೆಟ್ಟಿಗಾರ್ ಹಾಗೂ ಕಮಲ ಆಚಾರ‍್ತಿ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ ಹಾಗೂ ಉದ್ಯಮಿ ಕೆ. ಎ. ಅಬ್ದುಲ್ಲ ಕ್ರಿಸ್ ಮಸ್ ಸಂದೇಶ ನೀಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಪ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ಮೈಕಲ್ ಪಿಂಟೊ, ಐವಿ ಅರಾನ್ಹಾ ಮತ್ತಿತರರು ಉಪಸ್ಥಿತರಿದ್ದರು.
ಫಿಲೋಮಿನಾ ಸಿಕ್ವೇರಾ ಸ್ವಾಗತಿಸಿ ಹೆಲೆನ್ ಡಿಸೋಜ ವಂದಿಸಿದರು. ವಿನ್ಸೆಂಟ್ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-28121201

 

 

Comments

comments

Leave a Reply

Read previous post:
ಕಿನ್ನಿಗೋಳಿ : ಕ್ರಿಸ್‌ಮಸ್ ಆಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಐ.ಸಿ.ವೈ.ಎಮ್., ಕೆಥೋಲಿಕ್ ಸಭಾ, ಸೈಂಟ್ ಮೇರಿಸ್ ಹಿ.ಪ್ರಾ. ಶಾಲೆ ಹಾಗೂ ಚರ್ಚ್‌ನ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಭಾ ಭವನದಲ್ಲಿ ಸಾರ್ವಜನಿಕ ಕ್ರಿಸ್‌ಮಸ್...

Close