ಕಿನ್ನಿಗೋಳಿ ರೋಟರಿ ಶಾಲೆ ವಾರ್ಷಿಕೋತ್ಸವ

ಕಿನ್ನಿಗೋಳಿ : ವಿದ್ಯಾರ್ಥಿಗಳಲ್ಲಿ ಸ್ವಚಿಂತನೆ, ಸ್ವಾವಲಂಬನೆ, ಸೃಜನಶೀಲತೆ ಬಹಳ ಕಡಿಮೆಯಾಗಿದೆ. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಂತರಿಕ ಭಾವನೆಗಳನ್ನು ಅರಿತು ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ಶಿಕ್ಷಣ ನೀಡಬೇಕು ಎಂದು ಉಜಿರೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಹೇಳಿದರು.
ಇತ್ತೀಚೆಗೆ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಜತಮಹೋತ್ಸವ ಮತ್ತು ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲಾ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿದ ಕಿನ್ನಿಗೋಳಿ ರೋಟರಿ ಸಂಸ್ಥೆಯ ಸುರೇಂದ್ರನಾಥ .ವಿ. ಶೆಣೈ, ಶೇಷರಾಮ ಶೆಟ್ಟಿ, ಟಿ.ಎಚ್. ಮಯ್ಯದ್ದಿ, ಕೆ. ಲವ ಶೆಟ್ಟಿ, ಜೆರೋಮ್ ಮೊರಾಸ್ , ಜಯರಾಮ ಪೂಂಜಾ, ಎಮ್. ಬಾಲಕೃಷ್ಣ ಶೆಟ್ಟಿ, ಪಿ. ಸತೀಶ್ ರಾವ್, ಹಾಗೂ ಶಿಕ್ಷಕ ವೃಂದದ ನಿರ್ಮಲ ಕ್ವಾಡ್ರಸ್, ಜೂಲಿಯೆಟ್ ಅರಾನ್ಹ, ಶಾಂತಾ, ಸೂರ್ಯಕಾಂತ್ ನಾಯಕ್, ಲಕ್ಷ್ಮೀ ನಾರಾಯಣ ರಾವ್, ಜೆಸಿಂತಾ ಕರ್ಡೋಜ, ಸದಾನಂದ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಾಜಿ ಜಿಲ್ಲಾ ಗವರ್ನರ್ ಸೂರ್ಯಪ್ರಕಾಶ್ ಭಟ್ ಶಾಲೆಯ ವೆಬ್‌ಸೈಟ್ ಅನಾವರಣಗೊಳಿಸಿದರು. ಶಾಲಾ ಸಮಿತಿಯ ಉಪಾಧ್ಯಕ್ಷ ಸತೀಶ್ಚಂದ್ರ ಹೆಗ್ಡೆ, ಕೋಶಾಧಿಕಾರಿ ವೇದವ್ಯಾಸ ಉಡುಪ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರತೀಕ್ ಶೆಟ್ಟಿ, ಶಾಲಾ ನಾಯಕ ಶಯನ್ ಶೆಟ್ಟಿ, ಉಪನಾಯಕಿ ಸಮೀಕ್ಷಾ ಕಟೀಲು ಉಪಸ್ಥಿತರಿದ್ದರು.
ಶಾಲಾ ಸಮಿತಿ ಕಾರ್ಯದರ್ಶಿ ಪಿ. ಸತೀಶ್ ರಾವ್ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಗಿಲ್ಬಟ್ ಡಿ’ಸೋಜ ವರದಿ ವಾಚಿಸಿದರು.

Comments

comments

Leave a Reply

Read previous post:
ರಾಜರತ್ನಪುರ :ಅಂಗನವಾಡಿ ಶಿಲಾನ್ಯಾಸ

ಕಿನ್ನಿಗೋಳಿ: ರಾಜರತ್ನಪುರ ಸಾರ್ವಜನಿಕ ಬಾಲಗಣೇಶೋತ್ಸವ ಸಮಿತಿ, ಕೊಡೆತ್ತೂರು ಬ್ರಾಮರಿ ಮಹಿಳಾ ಸಮಾಜ ಹಾಗೂ ಸಾರ್ವಜನಿಕರ ಸಹಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೮೮ನೇ ಜನ್ಮ ದಿನಾಚರಣೆ...

Close