ಐಕಳದಲ್ಲಿ ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ : ಐಕಳ ಕುಂರ್ಬಿಲ್‌ಗುತ್ತುವಿನಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಂದರ್ಭ ಕಲಾವಿದರು ಹಾಗೂ ದೈವಾರಾದಕರನ್ನು ಅಭಿನಂದಿಸಲಾಯಿತು.
ಕಟೀಲು ಮೇಳದ ಹಿರಿಯ ಕಲಾವಿದರಾದ ರೇಂಜಾಳ ರಾಮಕೃಷ್ಣ ಭಟ್, ಸುಬ್ರಾಯ ಪಾಟಾಳಿ, ದೈವ ಪಾತ್ರಿ ದಿವಾಕರ ಪೂಜಾರಿ, ದೈವಾರಾಧಕ ನಾರಾಯಣ ಅಂಚನ್, ಜಗನಾಥ, ರಾಮಪ್ಪ ಪೂಜಾರಿ, ಭೂತ ನರ್ತಕ ಮುನ್ನಾ ಎರ್ಮಾಳು, ಹಾಗೂ ಉದ್ಯಮಿ ಕ್ಲಾಡಿಸ್ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗದ ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ, ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಗಣೇಶ್ ಭಟ್ ಏಳಿಂಜೆ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮುಲ್ಕಿ ಮೂಡಬಿದ್ರೆ ಶಾಸಕ ಆಭಯಚಂದ್ರ ಜೈನ್, ಯುಗಪುರುಷದ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಐಕಳ ಗುಣಪಾಲ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Aikala-31121201

Comments

comments

Leave a Reply

Read previous post:
ಫೇಮಸ್ ಯೂತ್ ಕ್ಲಬ್ ರಜತ ಮಹೋತ್ಸವ

ತೋಕೂರು : ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉಪಯುಕ್ತ ಮಾಹಿತಿ ಹಾಗೂ ಸಹಾಯ ಹಸ್ತ ನೀಡುವುದು ಸೇವಾ ಸಂಸ್ಥೆಗಳ ಆದ್ಯ ಕರ್ತವ್ಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್...

Close