ಫೇಮಸ್ ಯೂತ್ ಕ್ಲಬ್ ರಜತ ಮಹೋತ್ಸವ

ತೋಕೂರು : ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉಪಯುಕ್ತ ಮಾಹಿತಿ ಹಾಗೂ ಸಹಾಯ ಹಸ್ತ ನೀಡುವುದು ಸೇವಾ ಸಂಸ್ಥೆಗಳ ಆದ್ಯ ಕರ್ತವ್ಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಶನಿವಾರ 10ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ತೋಕೂರು ಹೊಸಮನೆ ದಿ|ಶಕುಂತಳಾ ಶೆಟ್ಟಿ ಇವರ ಸ್ಮರಣಾರ್ಥ ಪತಿ ಗುಣಪಾಲ ಶೆಟ್ಟಿ ಮತ್ತು ಕುಟುಂಬದವರು ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಹಾಗೂ ಶಾಸಕರ ನಿಧಿಯಿಂದ ನಿರ್ಮಾಣಗೊಂಡ ಹೈಮಾಸ್ಟ್ ದೀಪ ಉದ್ಘಾಟಿಸಿದರು.
ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ಸಂಸ್ಥೆಯ ಮಾಜಿ ಅಧ್ಯಕ್ಷರು, ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ಬೊಳ್ಳೂರು ಜುಮ್ಮಾ ಮಸೀದಿ ಧರ್ಮಗುರು ಅಲ್ ಹಾಜಿ ಅಸ್ಗರ್ ಫೈಝಿ, ಪಕ್ಷಿಕೆರೆ ಸಂತ ಜೂಡರ ಚರ್ಚ್ ಧರ್ಮಗುರು ಫಾ| ಆಂಡ್ರ್ಯೂ ಲಿಯೋ ಡಿ’ಸೋಜ, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಉಪನ್ಯಾಸಕ ಡಾ|ಗಣೇಶ್ ಅಮೀನ್ ಸಂಕುಮಾರ್, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ವೃತ್ತ ನಿರೀಕ್ಷಕ ಬಶೀರ್ ಆಹ್ಮದ್, ಉದ್ಯಮಿ ಮಯ್ಯದ್ದಿ, ಮ.ನ.ಪಾ. ಕಿರಿಯ ಅಭಿಯಂತರರು ಜಿ. ಅರುಣ್ ಕುಮಾರ್, ಉದ್ಯಮಿ ಭಾಸ್ಕರ್ ಶೆಟ್ಟಿ ಕಟಪಾಡಿ, ಸಂಘ ಗೌರವಾಧ್ಯಕ್ಷ ಗುಣಪಾಲ್ ಶೆಟ್ಟಿ, ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಸಂಪತ್ ಶೆಟ್ಟಿ ಸ್ವಾಗತಿಸಿ ಗುರುರಾಜ ಎಸ್. ಪೂಜಾರಿ ಪ್ರಸ್ತಾವನಗೈದರು. ಭಾಸ್ಕರ್ ಅಮೀನ್ ವರದಿ ವಾಚಿಸಿದರು. ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-31121204

 10ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿನೆ

Kinnigoli-31121203

ದಿ|ಶಕುಂತಳಾ ಶೆಟ್ಟಿ ಇವರ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ

Kinnigoli-31121205

ಶಾಸಕರ ನಿಧಿಯ ಹೈಮಾಸ್ಟ್ ದೀಪ

Kinnigoli-31121206

Comments

comments

Leave a Reply

Read previous post:
ಐಕಳ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಐಕಳ ದಾಮಸ್‌ಕಟ್ಟೆಯ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ 55ನೇ ಮಂಗಲೋತ್ಸವ ನಡೆಯಿತು. ಏಳಿಂಜೆ ಶ್ರೀಧರ ಭಟ್, ಅಚ್ಯುತ ಮಲ್ಯ, ರಾಮದಾಸ ಶೆಣೈ, ಗೋಪಾಲ ಶೆಣೈ, ರಾಜೇಂದ್ರ, ರವೀಂದ್ರ...

Close