ಗುತ್ತಕಾಡು ಸೌಹಾರ್ದ ಕಪ್

ಕಿನ್ನಿಗೋಳಿ : ತಾಳಿಪಾಡಿ ಶಾಂತಿನಗರ ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಮತ್ತು ರೋಟರಿ ಸಮುದಾಯ ದಳ ಶಾಂತಿನಗರ ಇವರ ಆಶ್ರಯದಲ್ಲಿ ಗುತ್ತಕಾಡು ಶಾಲಾ ಮೈದಾನದಲ್ಲಿ ಸೌಹಾರ್ದ ಕಪ್ ಕ್ರಿಕೆಟ್ ಪಂದ್ಯಾಟ ನಡೆಯಿತು.
ಫೈನಲ್‌ನಲ್ಲಿ ಪಲಿಮಾರ್ ಫ್ರೆಂಡ್ಸ್ ತಂಡ ಪ್ರಶಸ್ತಿ ಗಳಿಸಿತು. ಎಸ್.ಎಸ್.ಸಿ.ಸಿ ಮುಕ್ಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪಲಿಮಾರ್ ಫ್ರೆಂಡ್ಸ್ ತಂಡದ ರಿತೇಶ್ ದೇವಾಡಿಗ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಪಂಚಾಯಿತಿ ಸದಸ್ಯ ಗಣೇಶ್, ಯಕ್ಷಲಹರಿಯ ಇ. ಶ್ರೀನಿವಾಸ್ ಭಟ್, ಉದ್ಯಮಿ ಪಿ. ಸತೀಶ್ ರಾವ್, ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ತಂಡದ ಅಧ್ಯಕ್ಷ ಗುಲಾಬ್ ಹುಸೇನ್, ಅಸೀಫ್, ರೋಟರಿ ಸಮುದಾಯ ದಳ ಅಧ್ಯಕ್ಷ ಜಗದೀಶ್ ಆಚಾರ್ಯ, ಕಾರ್ಯದರ್ಶಿ ಯು. ಆರ್. ಶೆಟ್ಟಿ, ಮುಸ್ತಾಪಾ ಕಲ್ಕೆರೆ, ದಿವಾಕರ ಕರ್ಕೆರಾ, ಉದ್ಯಮಿ ಟಿ. ನಜೀರ್, ಮಹಮ್ಮದ್, ನಾರಾಯಣ ಅಸ್ಗರ್ ಆಲಿ, ಟಿ. ಹಸನಬ್ಬ ಮತ್ತಿತರರು ಉಪಸ್ಥಿತರಿದ್ದರು.

Kinnigoli-31121207

Comments

comments

Leave a Reply

Read previous post:
ಐಕಳದಲ್ಲಿ ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ : ಐಕಳ ಕುಂರ್ಬಿಲ್‌ಗುತ್ತುವಿನಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಂದರ್ಭ ಕಲಾವಿದರು ಹಾಗೂ ದೈವಾರಾದಕರನ್ನು ಅಭಿನಂದಿಸಲಾಯಿತು. ಕಟೀಲು ಮೇಳದ ಹಿರಿಯ ಕಲಾವಿದರಾದ ರೇಂಜಾಳ ರಾಮಕೃಷ್ಣ...

Close