64ನೇ ಗಣರಾಜ್ಯೋತ್ಸವ ದಿನಾಚರಣೆ

P.V. Rao

ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ , ತೋಕೂರು ಇದರ ಎನ್.ಎಸ್.ಎಸ್. ಘಟಕ ಮತ್ತು ರೋವರ‍್ಸ್ ಘಟಕಗಳ ಜಂಟೀ ಆಶ್ರಯದಲ್ಲಿ ೬೪ನೇ ಗಣರಾಜ್ಯೋತ್ಸವ ದಿನಾಚರಣೆ ಯನ್ನು ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು. ಪಾಂಪೇ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಶ್ರೀಧರ್ ಟಿ.ಎಸ್. ಇವರು ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಮಾತಾನಾಡುತ್ತಾ ದೇಶದ ರಕ್ಷಣೆಗೆ ವಿದ್ಯಾರ್ಥಿಗಳು ಯಾವಾಗಲೂ ಕಟೀಬದ್ಧರಾಗಿರಬೇಕು, ದೇಶದ ಸೇವೆ ಮಾಡಲು ಅಸಾಧ್ಯಾವಾದರೂ ಇನೊಬ್ಬರಿಗೆ ಅನ್ಯಾಯ ಮಾಡದೆ ಸತ್ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀಧರ್ ಟಿ.ಎಸ್. ಮತ್ತು ಅಶ್ವಿನ್ ದೇವಾಡಿಗ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಸಂಸ್ಥೆಯ ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ , ರಘುರಾಮ ರಾವ್, ದಯಾನಂದ ಲಾಗ್ವಾಣ್‌ಕರ್ , ಅಶ್ವಿನ್ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡಿದರು. ಕಾರ್ಯಕ್ರಮವನ್ನು ಲಕ್ಷ್ಮೀಕಾಂತ ನಿರೂಪಿಸಿ, ಹರಿ ಎಚ್ ಇವರು ಧನ್ಯವಾದ ನೀಡಿದರು.

 Kinnigoli-01021301

Comments

comments

Leave a Reply

Read previous post:
ಕಟೀಲು ಅಷ್ಟಮಂಗಲ : ಶೀಘ್ರ ಕುದ್ರು ಜೀರ್ಣೋದ್ಧಾರ

Mithuna Kodethoor ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆ ಮಂಗಳವಾರ ರಾತ್ರಿ ಸಮಾಪನಗೊಂಡಿತು. ಮೇಲ್ಛಾವಣಿ ಇಲ್ಲದ ಗರ್ಭಗುಡಿ, ತೀರ್ಥಬಾವಿ,...

Close