ಕಲಿಕೆಯಲ್ಲಿ ಏಕಾಗ್ರತೆ ಅಗತ್ಯ : ರಾಜೇಂದ್ರ ಭಟ್

ಕಿನ್ನಿಗೋಳಿ: ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಂಯಮ, ಏಕಾಗ್ರತೆ ಅಗತ್ಯ ಎಂದು ಜೇಸೀಸ್ ರಾಷ್ಟ್ರೀಯ ಮಟ್ಟದ ತರಬೇತುದಾರ ಬೆಳ್ಮಣ್ಣು ರಾಜೇಂದ್ರ ಭಟ್ ಹೇಳಿದರು.
ಕಿನ್ನಿಗೋಳಿ ರೋಟರಿ ಸಂಸ್ಥೆ ಹಾಗೂ ಸಂಸ್ಥೆಯ ಪ್ರವರ್ತಿತ 7ಇಂಟರಾಕ್ಟ್ ಕ್ಲಬ್ ಗಳ ಜಂಟೀ ಆಶ್ರಯದಲ್ಲಿ ಶನಿವಾರ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಎಸ್. ಎಸ್. ಎಲ್.ಸಿ. ಪರೀಕ್ಷೆ ತಯಾರಿ ಹಾಗೂ ವೃತ್ತಿ ಮಾರ್ಗ ದರ್ಶನ ಬಗ್ಗೆ ಉಪನ್ಯಾಸವಿತ್ತು ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ , ರೋಟರಿ ಶಾಲಾ ಉಪಾಧ್ಯಕ್ಷ ಸತೀಶ್ಚಂದ್ರ ಶೆಟ್ಟಿ, ಎಸ್.ವಿ. ಶೆಣೈ, ರೋಟರಿ ಶಾಲಾ ಮುಖ್ಯ ಶಿಕ್ಷಕ ಗಿಲ್ಬಟ್ ಡಿಸೋಜ ಉಪಸ್ಥಿತರಿದ್ದರು. ಶಿಕ್ಷಕಿ ಶೈಲಜಾ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಸುಮಾರು 170 ಮಂದಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

Kinnigoli-2021303

Kinnigoli-2021304

Comments

comments

Leave a Reply

Read previous post:
ನಿಧನ-ಕಿಟ್ಟಮ್ಮಪೂಜಾರ‍್ತಿ

Bhagyavan Sanil   ಮೂಲ್ಕಿ: ಕಳಸ ಕಾರಗದ್ದೆ ಕಿಟ್ಟಮ್ಮಪೂಜಾರ‍್ತಿ(95) ಆದಿತ್ಯವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಇಳಿಹರೆಯದವರೆಗೂ ಸೂಲಗಿತ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ...

Close