ಕಟೀಲಿನಲ್ಲಿ ಉಚಿತ ಸಾಮೂಹಿಕ ವಿವಾಹ

ಕಟೀಲು : ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಎಪ್ರಿಲ್ 29ರಂದು ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಲಿದೆ. ಮಧುಮಗನಿಗೆ ಧೋತಿ, ಶಾಲು ಹಾಗೂ ಮಧುಮಗಳಿಗೆ ಸೀರೆ, ರವಕೆ ಕಣ, ಕರಿಮಣಿ ನೀಡಲಾಗುವುದು ಎಂದು ದಿ| ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.
ಆಸಕ್ತರು ಲಕ್ಷ್ಮೀನಾರಾಯಣ ಆಸ್ರಣ್ಣ (ಶ್ರೀ ಕ್ಷೇತ್ರ ಕಟೀಲು), ಕೊಡೆತ್ತೂರು ಭುವನಾಭಿರಾಮ ಉಡುಪ ಯುಗಪುರುಷ ಕಿನ್ನಿಗೋಳಿ, ಪಿ.ಸತೀಶ್ ರಾವ್ ಸ್ವಾತಿ ಸ್ವೀಟ್ಸ್ ಕಿನ್ನಿಗೋಳಿ ಇವರನ್ನು ಸಂಪರ್ಕಿಸಬಹುದು.

Comments

comments

Leave a Reply

Read previous post:
ಮುಲ್ಕಿ ಕಾಂಗ್ರೇಸ್ ನಡಿಗೆ

Prakash M Suvarna

Close