ಮೂಲ್ಕಿ: ಹೃದಯರೋಗ ಮತ್ತು ಆರೋಗ್ಯ ತಪಸಣಾ ಶಿಬಿರ

Bhagyavan Sanil
ಮೂಲ್ಕಿ: ಆಧುನಿಕ ಬದುಕು ಒತ್ತಡದ ಜೀವನ ದುಶ್ಚಟಗಳು ಹಾಗೂ ಪ್ರಕೃತಿ ಮಾಲಿನ್ಯದಿಂದ ಜನರು ವಿವಿಧ ರೋಗಗಳಿಗೆ ತ್ತುತ್ತಾಗುವುದನ್ನು ತಪ್ಪಿಸಲು ಗ್ರಾಮೀಣ ವರ್ಗದ ಜನರಿಗೆ ಉಚಿತ ವೈದ್ಯಕೀಯ ಶಿಬಿರಗಳು ವರದಾಯಕವಾಗಿದೆ ಎಂದು ಉದ್ಯಮಿ ಕೊಳುವೈಲು ಸತೀಶ್ ಭಟ್ ಹೇಳಿದರು.
ಮಂಗಳವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ನಡೆದ ಉಚಿತ ಹೃದಯರೋಗ ಮತ್ತು ಆರೋಗ್ಯ ತಪಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಮಾತನಾಡಿದರು.
ಗ್ರಾಮೀಣ ವರ್ಗದ ಜನರು ಹೃದಯ ಸಂಭಂದಿತ ಸಂಕೀರ್ಣ ರೋಗಗಳಿಗೆ ತುತ್ತಾದಾಗ ನಗರ ಪ್ರದೇಶದಲ್ಲಿರುವ ಉನ್ನತ ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಲು ಆರ್ಥಿಕ ಮತ್ತು ಭಾಷೆಯ ಸಮಸ್ಯೆಯಿಂದ ಚಿಕಿತ್ಸೆ ವಂಚಿತರಾಗುತ್ತಿರುವ ಸಂದರ್ಭ ಗ್ರಾಮೀಣ ಪ್ರದೇಶದ ಸಮಾನ ಮನಸ್ಕರು ಸೇರಿ ನಡೆಸುವ ಸಂಘಟಣೆಯೊಂದಿಗೆ ನಗರದ ಉನ್ನತ ವೈದ್ಯಕೀಯ ಕೇಂದ್ರಗಳು ಕೈಜೋಡಿಸಿ ನಡೆಸುವ ಈ ಉಚಿತ ಸೇವೆ ಸ್ತುತ್ಯರ್ಹವಾಗಿದ್ದು ಇನ್ನೂ ಹೆಚ್ಚಿನ ಸೇವೆ ಬಡವರ ಮನೆ ಬಾಗಿಲಿಗೆ ಬಂದು ನೀಡುವಂತಾಗಬೇಕು ಎಂದರು.
ಕಿನ್ನಿಗೋಳಿ ಗ್ರಾಮ ಪಂ.ಅಧ್ಯಕ್ಷೆ ಶ್ಯಾಮಲಾ ಪಿ ಹೆಗ್ಡೆ ಶಿಭಿರಕ್ಕೆ ಚಾಲನೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ನವದುರ್ಗಾ ಯುವಕ ವೃಂದದ ಗೌರವಾಧ್ಯಕ್ಷ ಮೂಲ್ಕಿ ಠಾಣಾ ಎಎಸ್‌ಐ ಚಂದ್ರಹಾಸ ಸಾಲ್ಯಾನ್ ವಹಿಸಿದ್ದರು. ಅತಿಥಿಗಳಾಗಿ ಮಂಗಳೂರು ಜಸ್ಟೀಸ್ ಕೆ.ಎಸ್.ಹೆಗ್ಡೆ ಸ್ಮಾರಕ ಆಸ್ಪತ್ರೆಯ ಹೃದಯ ತಜ್ಞ, ಡಾ.ಸುಬ್ರಮಣ್ಯಂ,ಮೂತ್ರರೋಗ ತಜ್ಞ ಡಾ.ಶಶಿಧರ್ ಬೈಕುಂಜೆ,ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್,ಉದ್ಯಮಿ ಮನೊಜ್ ಕುಮಾರ್.ಹೇಮನಾಥ ಶೆಟ್ಟಿ,ಹರ್ಷರಾಜ ಶೆಟ್ಟಿ ಜಿಎಂ,ಸುರೇಶ್ ಶೆರಿಗಾರ್,ಸತೀಶ್ ಅಂಚನ್,ಸುಂಸರ ಅಂಚನ್,ರಂಗ ಕೋಟ್ಯಾನ್,ಜಯ.ಸಿ.ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.ವಿಜಯ ಕುಮಾರ್ ಕುಬೆವೂರು ಸ್ವಾಗತಿಸಿದರು,ಉದಯ ಅಮೀನ್ ಮಟ್ಟು ನಿರೂಪಿಸಿದರು.ಸದಾನಂದ ಪೂಜಾರಿ ವಂದಿಸಿದರು.

Kinnigoli-04021301

Comments

comments

Leave a Reply

Read previous post:
ಕಿನ್ನಿಗೋಳಿ ಮೂತ್ರ ಪಿಂಡ ರೋಗ ತಪಾಸಣಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ, ಕಿನ್ನಿಗೋಳಿ ರೋಟರಿ ಮತ್ತು ರೋಟರಾಕ್ಟ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಉಚಿತ ಮೂತ್ರ ಪಿಂಡ ರೋಗಗಳ ತಪಾಸಣಾ ಶಿಬಿರ...

Close