ವೃತ್ತಿ ಮಾರ್ಗದರ್ಶನ ಮತ್ತು ಸ್ವ ಉದ್ಯೋಗ ಪ್ರೇರಣಾ ಶಿಬಿರ

Bhagyavan Sanil
ಮೂಲ್ಕಿ: ಸ್ವಾವಲಂಭಿ ಉದ್ಯಮದ ಚಿಂಥನೆ ಸಹಿತ ಪದವಿ ಶಿಕ್ಷಣದೊಂದಿಗೆ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಮುನ್ನಡೆದು ಸಫಲರಾದರೆ ಇತರರಿಗೂ ಮಾರ್ಗದರ್ಶಿಯಾಗುತ್ತದೆ ಎಂದು ನಿಟ್ಟೆ ಮಹಾಲಿಂಗ ಅಢ್ಯಂತಾಯ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲೂಂಕರ್ ಹೇಳಿದರು
ಮೂಲ್ಕಿ ವಿಜಯಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಿಟ್ಟೆ ಮಹಾಲಿಂಗ ಅಢ್ಯಂತಾಯ ತಾಂತ್ರಿಕ ಮಹಾ ವಿದ್ಯಾಲಯದ ಸ್ವ ಉದ್ಯೋಗ ಪ್ರೇರಣಾ ಕೇಂದ್ರ {ಸ್ಟೆಪ್) ವತಿಯಿಂದ ವೃತ್ತಿ ಮಾರ್ಗದರ್ಶನ ಮತ್ತು ಸ್ವ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವುದ್ಯೋಗ ನಡೆಸಲು ಇಚ್ಚಿಸುವ ವಿದ್ಯಾರ್ಥಿಗಳು ತಾವು ನಡೆಸಲಿಚ್ಚಿಸುವ ಉದ್ಯೋಗದ ಸಾಧಕ ಭಾದಕ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಪಡೆದು ಅಧ್ಯಯನ ನಡೆಸಿ ಉದ್ಯಮ ಪ್ರಾರಂಬಿಸುವುದು ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ವಹಿಸಿದ್ದರು.
ಅತಿಥಿಗಳಾಗಿ ಸೈಂಟ್ ಆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎರಿಕ್ ಸಿ.ಲೋಬೊ, ನಿಟ್ಟೆ ಸ್ಟೆಪ್‌ನ ಚೀಪ್ ಪ್ರೋಜೆಕ್ಟ್ ಲೀಡರ್ ಡಾ.ಐ.ಆರ್.ಮಿತ್ತಂತಾಯ,ಡಾ.ಉದಯ ಕುಮಾರ್ ಜಿ,ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವ, ಕಾರ್ಯಕ್ರಮ ಸಂಯೋಜಕರಾದ ಪ್ರೊ ಹೆಚ್.ಜಿ.ನಾಗರಾಜ ನಾಯಕ್ ಉಪಸ್ಥಿತರಿದ್ದರು.ದುರ್ಗಾಗಣೇಶ್ ಪ್ರಾರ್ಥಿಸಿದರು.ಸಂದ್ಯಾ ಶೆಣೈ ನಿರೂಪಿಸಿದರು. ನಾಗರಾಜ್ ನಾಯಕ್ ವಂದಿಸಿದರು.

Kinnigoli-07021302

 

Comments

comments

Leave a Reply