ವೃತ್ತಿ ಕೌಶಲ ತರಬೇತಿ

ಕಿನ್ನಿಗೋಳಿ: ದ.ಕ. ಜಿಲ್ಲಾ ಪಂಚಾಯಿತಿ ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಪಂಚಾಯಿತಿ ಜನ ಶಿಕ್ಷಣ ಟ್ರಸ್ಟ್ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನವಸಾಕ್ಷರರ ಒಂದು ತಿಂಗಳ “ವೃತ್ತಿ ಕೌಶಲ ತರಬೇತಿ ಶಿಬಿರ” ಕಮ್ಮಜೆ ನೇಕಾರ ಕಾಲನಿಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಉದ್ಘಾಟಿಸಿದರು.
ಫಿನಾಯಿಲ್, ಸಾಬೂನು ದ್ರಾವಣ, ಪ್ಲೇಟ್ ಪೌಡರ್, ಬಟ್ಟೆ ಒಗೆಯುವ ಸಾಬೂನು ತಯಾರಿಕೆ, ಸ್ನಾನದ ಸಾಬೂನು, ಸಾಬೂನು ಪೌಡರ್, ಬಟ್ಟೆ ಚೀಲ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು.
ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಉಪಾಧ್ಯಕ್ಷೆ ಸರೋಜಿನಿ, ಪಂಚಾಯಿತಿ ಸದಸ್ಯ ಭಾಸ್ಕರ್, ಅನಿತಾ, ಸಂಪನ್ಮೂಲ ವ್ಯಕ್ತಿ ಯಶೋದಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-09021301

Comments

comments

Leave a Reply

Read previous post:
ಏಳಿಂಜೆ: ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ವರ್ಷಾವಧಿ ಜಾತ್ರೆ ಫೆಬ್ರವರಿ 11 ರಿಂದ 16 ರ ವರೆಗೆ ನಡೆಯಲಿದೆ. ಫೆಬ್ರವರಿ 12 ರಂದು ಧ್ವಜಾರೋಹಣ, ಫೆಬ್ರವರಿ 15 ರಂದು...

Close