ತೋಟಗಾರಿಕಾ ಇಲಾಖೆ ಮಾಹಿತಿ ಶಿಭಿರ

Bhagyavan Sanil

ಮೂಲ್ಕಿ:ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾಗಿ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ತೆಂಗು ಕೃಷಿ,ಅಂಗಾಂಶ ಬಾಳೆ ,ಚಿಕ್ಕು ಮಾವು ಮಲ್ಲಿಗೆ ಕೃಷಿಗೆ ಉಚಿತ ಅವಕಾಶ ನೀಡಲಾಗುತ್ತದೆ ಎಂದು ಮೂಲ್ಕಿ ರೈತ ಸಂಪರ್ಕ ಕೇಂದ್ರ ಸಹಾಯಕ ತೋಟಗಾರಿಕಾ ಅಧಿಕಾರಿ ಎಸ್.ನಾರಾಯಾಣಾಚಾರಿ ಹೇಳಿದರು.
ಬಾನುವಾರ ಕಿಲ್ಪಾಡಿ ಎಸ್.ಟಿ ಕಾಲನಿಯಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಮಂಗಳೂರು ತೋಟಗಾರಿಕಾ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತ ಬಂಧುಗಳಿಗೆ ಇಲಾಖೆಯ ಸವಲತ್ತುಗಳ ಮಾಹಿತಿ ಶಿಭಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸರ್ಕಾದಿಂದ ಸಿಗುವ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ವಿನಿಯೋಗಿಸಿ ಜೀವನವನ್ನು ಉನ್ನತಿಗೊಳಿಸಬೇಕು ಈ ನಿಟ್ಟಿನಲ್ಲಿ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂ.ಅಧ್ಯಕ್ಷೆ ಶಾರದಾ ವಿ. ಪೂಜಾರಿ ವಹಿಸಿದ್ದರು. ಸದಸ್ಯರಾದ ಗೋಪೀನಾಥ ಪಡಂಗ, ಗೀತಾ ಉಪಸ್ಥಿತರಿದ್ದರು.ಮಲ್ಲಿಕಾ ವಂದಿಸಿದರು.

Mulki-10021302

Comments

comments

Leave a Reply

Read previous post:
ಭಗವತ್‌ಗೀತಾರ್ಥ ಚಿಂತನೆ

Bhagyavan Sanil ಮೂಲ್ಕಿ: ಯಾರನ್ನೂ ಅವಹೇಳನ ಗೈಯದೆ ಸಾಧಿಸಿ ತೋರಿಸುವ ಮೂಲಕ ಮಾರ್ಗದರ್ಶಿಯಾಗಿರುವುದು ಮತ್ತು ಅಷ್ಟೈಶ್ವರ್ಯ ಇದ್ದರೂ ದಿನವೂ ದುಡಿಮೆ ಮಾಡಿಉಣ್ಣುವುದರಿಂದ ಶಾಂತಿ ಮತ್ತು ಆರೋಗ್ಯ ಗಳಿಕೆ...

Close