ಭಗವತ್‌ಗೀತಾರ್ಥ ಚಿಂತನೆ

Bhagyavan Sanil

ಮೂಲ್ಕಿ: ಯಾರನ್ನೂ ಅವಹೇಳನ ಗೈಯದೆ ಸಾಧಿಸಿ ತೋರಿಸುವ ಮೂಲಕ ಮಾರ್ಗದರ್ಶಿಯಾಗಿರುವುದು ಮತ್ತು ಅಷ್ಟೈಶ್ವರ್ಯ ಇದ್ದರೂ ದಿನವೂ ದುಡಿಮೆ ಮಾಡಿಉಣ್ಣುವುದರಿಂದ ಶಾಂತಿ ಮತ್ತು ಆರೋಗ್ಯ ಗಳಿಕೆ ಸಾಧ್ಯ ಎಂದು ಹಲವು ಸಹಸ್ರ ಮಾನಗಳ ಹಿಂದೆಯೇ ಗೀತಾಚಾರ್ಯನಾದ ಕೃಷ್ಣನು ಜನ ಜೀವನದ ಕೈಗನ್ನಡಿಯಾದ ಭಗವತ್‌ಗೀತೆಯಲ್ಲಿ ಭೋಧಿಸಿದ್ದಾನೆ ಎಂದು ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಸುರೇಶಾಚಾರ್ಯ ಹೇಳಿದರು.
ಅವರು ಶುಕ್ರವಾರ ಮೂಲ್ಕಿ ವಿಜಯಾ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ನಡೆದ ಭಗವತ್‌ಗೀತಾರ್ಥ ಚಿಂತನೆ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.
ಭಗವತ್‌ಗೀತೆಯ ಚಿಂತನೆಗಳು ಆಧುನಿಕ ಕಾಲಕ್ಕೂ ಪ್ರಸ್ತುತವಾಗಿದ್ದು ಪ್ರಜೆಗಳಿಗೆ ರಾಷ್ಟ್ರ ಪ್ರಜ್ಞೆ ಮತ್ತು ನೈತಿಕ ಶಾಂತಿಯುತ ಜೀವನ ಪದ್ದತಿಯನ್ನು ತಿಳಿಸುವ ಕಾರಣ ಕಾಲೇಜಿನಲ್ಲಿ ಯುವ ಪೀಳಿಗೆಯ ಅಭ್ಯುದಯಕ್ಕಾಗಿ ನಡೆಯುವ ಕಾರ್ಯಕ್ರಮ ಸ್ತುತ್ಯರ್ಹ ಎಂದರು.
ಮುಖ್ಯ ಅತಿಥಿಯಾದ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾದ್ಯಾಪಕರಾದ ಡಾ.ಎಚ್.ನಿರಂಜನರವರು ಮಾತನಾಡಿ ಹಿಂಸೆಯನ್ನು ದೂರವಿರಿಸಿದಷ್ಟು ಶಾಂತಿ ಸಮಾಧಾನಗಳು ನಮ್ಮದಾಗಲಿದೆ ಈ ನಿಟ್ಟಿನಲ್ಲಿ ಪ್ರತಿ ದಿನ ಭಗವತ್‌ಗೀತೆಯನ್ನು ಸ್ವಲ್ಪ ಪ್ರಮಾಣದಲ್ಲಿ ಓದಿ ಅಥೈಸಿಕೊಳ್ಳುವುದು ಬಹಳ ಅಗತ್ಯ ಎಂದರು.
ಈ ಸಂದರ್ಭ ಕಾಲೇಜು ಸಂಸ್ಕೃತ ವಿಭಾಗದ ಮಾಜಿ ಮುಖ್ಯಸ್ಥೆ ಪ್ರೊ.ಯಶೋಧರಾ ಕೆ. ಇವರನ್ನು ನಿವೃತ್ತಿಯ ಪ್ರಯುಕ್ತ ಕಾಲೇಜಿನ ಎಲ್ಲಾ ಭಾಷಾ ವಿಭಾಗದ ಪ್ರಾದ್ಯಾಪಕರು ಸಾಂಪ್ರದಾಯಿಕವಾಗಿ ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು. ವಿದ್ಯಾದರ ಪಂಡಿತ್ ಶಿಭಿರದ ಬಗ್ಗೆ ಅನುಭವ ಕಥನ ಹೇಳಿದರು.ಪ್ರೊ.ಅನುಸೂಯ ಕರ್ಕೇರಾ ಮತ್ತು ಸೋಮಶೇಖರ್ ಭಟ್ ಶುಭಾಶಂಸನೆ ಗೈದರು.ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್,ಪಿಯು ಕಾಲೇಜು ಪ್ರಾಂಶುಪಾಲರಾದ ಪ್ರೊ.ಪಮೀದಾ ಬೇಗಂ,ಕಾರ್ಯಕ್ರಮ ಸಂಯೋಜಕ ಪ್ರೊ ಜಯರಾಮ ಬಿ ಉಪಸ್ಥಿತರಿದ್ದರು. ಡಾ. ಎಸ್ ರಾಮಕೃಷ್ಣನ್ ಸ್ವಾಗತಿಸಿದರು. ಪ್ರೊ.ಹಯವದನ ಉಪಾಧ್ಯ ನಿರೂಪಿಸಿದರು.ಶೃತಿ ವಂದಿಸಿದರು.

Mulki-10021301

Comments

comments

Leave a Reply

Read previous post:
ನೈತಿಕ ಮೌಲ್ಯದ ಶಿಕ್ಷಣ ಅಗತ್ಯ : ಉಮೇಶ್ ರಾವ್ ಎಕ್ಕಾರು

ಕಿನ್ನಿಗೋಳಿ: ನೈತಿಕ ಮೌಲ್ಯದ ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದು ನಿವೃತ್ತ ಶಿಕ್ಷಕ ಸಾಹಿತಿ ಉಮೇಶ್ ರಾವ್ ಎಕ್ಕಾರ್ ಹೇಳಿದರು. ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಪಂಜ...

Close