ಎಸ್. ಕೋಡಿ ಸಂಗಮ ಮಹಿಳಾ ಮಂಡಲ ದಶಮಾನೋತ್ಸವ

ಕಿನ್ನಿಗೋಳಿ : ಮಹಿಳೆ ಕುಟುಂಬದ ಚೈತನ್ಯ ಶಕ್ತಿ, ಮಹಿಳೆಯರು ಸಮಾಜದ ಮುಂಚೂಣಿಗೆ ಬಂದರೆ ದೇಶ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಕಾಣುವುದು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಶನಿವಾರ ನಡೆದ ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ ದಶಮಾನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರಾದ ವೆಂಕಟೇಶ್ ಹಾಗೂ ಅಮಿತಾ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪ್ರಶಸ್ತಿ ವಿಜೇತೆ ಕುಳಾಯಿ ಮಹಿಳಾ ಮಂಡಲ ಅಧ್ಯಕ್ಷೆ ರಮಾ ವಿಷ್ಣುಮೂರ್ತಿ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮುಲಿ ಬಿಲ್ಲವ ಮಹಿಳಾ ಘಟಕದ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಲೆಟ್ ಪಿಂಟೊ, ದ.ಕ ಜಿಲ್ಲಾ ಮಹಿಳಾ ವೇದಿಕೆ ಅಧ್ಯಕ್ಷೆ ಕು| ನಂದಾ ಪಾಯಸ್, ಉದ್ಯಮಿ ಪಿ. ಸತೀಶ್ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ , ಯಕ್ಷಗಾನ ಸಂಘಟಕಿ ಪೂರ್ಣಿಮಾ ಯತೀಶ್, ನಾಟಕಕಾರ ರವೀಂದ್ರ ಕೆರೆಕಾಡು. ಸಂಗಮ ಮಹಿಳಾ ಮಂಡಲ ಅಧ್ಯಕ್ಷೆ ಜಯಲಕ್ಷ್ಮೀ ರಾವ್, ಕಾರ್ಯದರ್ಶಿ ಪ್ರಮೀಳಾ ಡಿ. ಸುವರ್ಣ ಉಪಸ್ಥಿತರಿದ್ದರು.
ಕೋಶಾಧಿಕಾರಿ ಶಶಿ ಸುರೇಶ್ ಸ್ವಾಗತಿಸಿದರು. ಆಶಾ ಗಿರೀಶ್ ವಂದಿಸಿದರು. ಆಶಾಲತ ಕಾರ್ಯಕ್ರಮ ನಿರೂಪಿಸಿದರು.

Kinnigoli-10021301

Comments

comments

Leave a Reply

Read previous post:
ತೋಟಗಾರಿಕಾ ಇಲಾಖೆ ಮಾಹಿತಿ ಶಿಭಿರ

Bhagyavan Sanil ಮೂಲ್ಕಿ:ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾಗಿ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ತೆಂಗು ಕೃಷಿ,ಅಂಗಾಂಶ ಬಾಳೆ ,ಚಿಕ್ಕು ಮಾವು ಮಲ್ಲಿಗೆ ಕೃಷಿಗೆ ಉಚಿತ ಅವಕಾಶ ನೀಡಲಾಗುತ್ತದೆ...

Close