ಜನಬೆಂಬಲ ಪಡೆಯುತ್ತಿರುವ ಮೂಲ್ಕಿ ತಾಲ್ಲೂಕು ಹೋರಾಟ

Narendra Kerekad
ಮೂಲ್ಕಿ: ಮೂಲ್ಕಿ ತಾಲ್ಲೂಕಿಗಾಗಿ ಕಳೆದ 40 ವರ್ಷದಿಂದ ಧ್ವನಿಯಾಗಿರುವ ಮೂಲ್ಕಿ ತಾಲ್ಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿಯು ಸೋಮವಾರದಿಂದ ನಡೆಸುತ್ತಿರುವ ಸಾರ್ವಜನಿಕ ಧರಣಿಗೆ ಮೂಲ್ಕಿ ಹೋಬಳಿಯ ವಿವಿಧ ಕಡೆಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದ್ದು ಮಂಗಳವಾರ ರಾಷ್ಟ್ರೀಯ ಹೆದ್ದಾರಿಯನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಹೋರಾಟ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ಹೆದ್ದಾರಿ ಬಂದ್ ನಡೆಸಿದ ಪ್ರತಿಭಟನಾಕಾರರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಸರ್ಕಾರವು ಮೂಲ್ಕಿಯ ತಾಲ್ಲೂಕಿನ ಕೂಗಿಗೆ ಕುರುಡಾಗಿದೆ ಎಂದು ಲೇವಡಿ ಮಾಡಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹರಿಕೃಷ್ಣ ಪುನರೂರು ರಾಜಕೀಯ ಉದ್ದೇಶದಿಂದ ಮಾತ್ರ ಮೂಲ್ಕಿಯನ್ನು ಹೊರಗಿಟ್ಟು ಜನತೆಯ ತಾಳ್ಮೆಯನ್ನು ಪರೀಕ್ಷಿಸಿದಲ್ಲಿ ಜನರೇ ಸೂಕ್ತ ಉತ್ತರ ನೀಡುವರು, ಜನರಿಂದ ಚುನಾಯಿತರಾದವರು ರಾಜಕೀಯ ಮಾತನಾಡದೇ ನೇರವಾಗಿ ಮೂಲ್ಕಿಯನ್ನು ತಾಲ್ಲೂಕು ಮಾಡಲು ಕ್ರಮ ಕೈಗೊಳ್ಳಬೇಕು, ಕಳೆದ 40 ವರ್ಷದ ಕೂಗು ಕೇಳಿಸದ ಆಡಳಿತಕ್ಕೆ ಮುಂದಿನ ದಿನದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡಿದರು.
ಸಮಿತಿಯ ಕೆ.ಭುವನಾಭಿರಾಮ ಉಡುಪ, ದಿನೇಶ್ ಶೆಟ್ಟಿ ಉಳ್ಳೆಪಾಡಿ, ಹರೀಶ್ ಪುತ್ರನ್, ಗುಣಪಾಲ ಶೆಟ್ಟಿ, ಆಶಾ ಸುವರ್ಣ, ವನಿತಾ ಉದಯ ಅಮಿನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಎಂ.ಆಸಿಫ್, ಪುತ್ತುಬಾವ, ಸತೀಶ್ ಅಂಚನ್, ಸುನಿಲ್ ಆಳ್ವಾ, ಕಿನ್ನಿಗೋಳಿ ಗ್ರಾ,ಪಂ,ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಕಾಂಗ್ರೇಸ್ಸಿನ ಜೊಸ್ಸಿ ಪಿಂಟೋ, ಎಂ.ಬಿ.ನೂರ್ ಮಹಮ್ಮದ್, ಅಬ್ದುಲ್ ರಜಾಕ್, ತಿಮ್ಮಪ್ಪ ಕೋಟ್ಯಾನ್, ಶಾಲೆಟ್ ಪಿಂಟೋ, ಗೋಪಿನಾಥ ಪಡಂಗ, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಬೆರ್ನಾರ್ಡ್, ಮೂಲ್ಕಿ ಲಯನ್ಸ್ ಅಧ್ಯಕ್ಷ ಸತೀಶ್ ಕಾಮತ್, ಬಿಜೆಪಿ ಉಮೇಶ್ ಮಾನಂಪಾಡಿ, ಉದಯ ಅಮಿನ್ ಮಟ್ಟು, ಮೂಲ್ಕಿ ಬಿಲ್ಲವ ಸಂಘ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರ್‌ಕಲ್ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡರು.
ಕೆ.ಎಸ್.ರಾವ್ ನಗರದ ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿಯ ಸದಸ್ಯರು ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತ ಪಡಿಸಿ ತಮಟೆ ಬಾರಿಸಿ ಮೂಲ್ಕಿ ಪೇಟೆಯಲ್ಲಿ ಪಾದಯಾತ್ರೆ ನಡೆಸಿ ಧರಣಿಯಲ್ಲಿ ಪಾಲ್ಗೊಂಡರು. ಸಮಿತಿ ಅಧ್ಯಕ್ಷ ಮಂಜುನಾಥ ಆರ‍್ಕೆ, ಉಪಾಧ್ಯಕ್ಷ ಅಶೋಕ್ ಪೂಜಾರ, ವಿಠಲ, ಭೀಮಾಶಂಕರ ಆರ್.ಕೆ, ಮತ್ತಿತರರಿದ್ದರು. ಮೂಲ್ಕಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಶಾಂಭವಿ ಜೇಸಿಐ, ಕೆ.ಎಸ್.ರಾವ್. ಯುವ ವೃಂದ, ದ.ಕ ಜಿಲ್ಲಾ ಪೋಟೋಗ್ರಾಫರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯ, ಯುವವಾಹಿನಿ ಮೂಲ್ಕಿ ಘಟಕ, ಮೂಲ್ಕಿ ಪರ್ತಕರ್ತರ ಸಂಘ, ಸ್ಥಳೀಯ ಅನೇಕ ಸಂಘ ಸಂಸ್ಥೆಗಳು ಬಹಿರಂಗವಾಗಿ ಬೆಂಬಲವನ್ನು ಘೋಷಿಸಿದರು.

Kinnigoli-12021304

Comments

comments

Leave a Reply

Read previous post:
ಮೂಲ್ಕಿ ತಾಲ್ಲೂಕು ರಚನೆಗೆ ಹಿನ್ನಡೆ

Narendra Kerekad, Bhagyavan Sanil ಮೂಲ್ಕಿ: ರಾಜಕೀಯ ಶಕ್ತಿಗಳ ಮೇಲಾಟದಿಂದ ಹಾಗೂ ಜನಪ್ರತಿನಿಧಿಗಳ ಸಂಪೂರ್ಣ ವೈಫಲ್ಯದಿಂದಲೇ ಬಹುಕಾಲದ ಬೇಡಿಕೆಯಾದ ಮೂಲ್ಕಿ ತಾಲ್ಲೂಕು ರಚನೆಗೆ ಹಿನ್ನಡೆ ಆಗಿದೆ. ಎಲ್ಲಾ...

Close