ಮೂಲ್ಕಿ ತಾಲ್ಲೂಕು ರಚನೆಗೆ ಹಿನ್ನಡೆ

Narendra Kerekad, Bhagyavan Sanil

ಮೂಲ್ಕಿ: ರಾಜಕೀಯ ಶಕ್ತಿಗಳ ಮೇಲಾಟದಿಂದ ಹಾಗೂ ಜನಪ್ರತಿನಿಧಿಗಳ ಸಂಪೂರ್ಣ ವೈಫಲ್ಯದಿಂದಲೇ ಬಹುಕಾಲದ ಬೇಡಿಕೆಯಾದ ಮೂಲ್ಕಿ ತಾಲ್ಲೂಕು ರಚನೆಗೆ ಹಿನ್ನಡೆ ಆಗಿದೆ. ಎಲ್ಲಾ ಹೋರಾಟಗಳು ವ್ಯರ್ಥ ಆಗಬಾರದು, ಕಾನೂನು ರೀತಿಯ ಹಾಗೂ ಸಂವಿದಾನ ಬದ್ಧ ಹೋರಾಟದಿಂದ ಬೇಡಿಕೆಗಳು ಈಡೇರಬೇಕು ಹಾಗೂ ಮೂಲ್ಕಿಯಲ್ಲಿನ ಎಲ್ಲಾ ಅರ್ಹತೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಶಾಸಕರ ಮೂಲಕ ಪ್ರಯತ್ನ ನಡೆಯಲಿ ಎಂದು ಮೂಲ್ಕಿ ತಾಲ್ಲೂಕು ಹೋರಾಟ ಸಮಿತಿಯ ಹಿರಿಯ ಸದಸ್ಯ ಗುಂಡಾಲು ಮಹಾಬಲ ಶೆಟ್ಟಿ ಹೇಳಿದರು.
ಮೂಲ್ಕಿ ಬಸ್ ನಿಲ್ದಾಣದಲ್ಲಿ ಸೋಮವಾರ ಮೂಲ್ಕಿ ತಾಲ್ಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿಯ ಸಂಯೋಜನೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಸಾರ್ವಜನಿಕ ಧರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಿತಿಯ ಪ್ರಮುಖರಾದ ಕಿನ್ನಿಗೋಳಿಯ ಕೊಡೆತ್ತೂರು ಭುವನಾಭಿರಾಮ ಉಡುಪ ಮಾತನಾಡಿ ಮೂಲ್ಕಿ ತಾಲ್ಲೂಕು ಘೋಷಣೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ, ಯಾವುದೇ ರಾಜಕೀಯ ರಹಿತವಾಗಿ ಮೂಲ್ಕಿ ಜನತೆಯ ಬೇಡಿಕೆಯಾಗಿ ಹೋರಾಟ ನಡೆಸುತ್ತಿದ್ದು ಯಾರನ್ನು ಹೋಗಳದೇ ಅಥವ ದೂರಿಕೊಳ್ಳದೇ ನಮ್ಮ ಬೇಡಿಕೆಯನ್ನು ಮನ್ನಿಸುವವರೆಗೂ ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ ಈ ಧರಣಿ ಸತ್ಯಾಗ್ರಹ ಆರಂಭ ಮಾತ್ರ ಎಂದು ಹೇಳಿದರು.
ಸಮಿತಿ ಹರೀಶ್ ಪುತ್ರನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ಸುವರ್ಣ, ತಾಲ್ಲೂಕು ಪಂಚಾಯಿತಿ ಸದಸ್ಯೆ ವನಿತಾ ಉದಯ ಅಮಿನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಎಂ.ಆಸಿಫ್, ಪುತ್ತುಬಾವ, ಸತೀಶ್ ಅಂಚನ್, ಸುನಿಲ್ ಆಳ್ವಾ, ಕಿನ್ನಿಗೋಳಿ ಗ್ರಾ,ಪಂ,ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಕಾಂಗ್ರೇಸ್ಸಿನ ಎಂ.ಬಿ.ನೂರ್ ಮಹಮ್ಮದ್, ಅಬ್ದುಲ್ ರಜಾಕ್, ತಿಮ್ಮಪ್ಪ ಕೋಟ್ಯಾನ್, ಗೋಪಿನಾಥ ಪಡಂಗ, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಬೆರ್ನಾರ್ಡ್, ಮೂಲ್ಕಿ ಲಯನ್ಸ್ ಅಧ್ಯಕ್ಷ ಸತೀಶ್ ಕಾಮತ್, ಬಿಜೆಪಿ ಉಮೇಶ್ ಮಾನಂಪಾಡಿ, ಉದಯ ಅಮಿನ್ ಮಟ್ಟು, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರ್‌ಕಲ್ ಇನ್ನಿತರರು ಸತ್ಯಾಗ್ರಹ ಧರಣಿಯಲ್ಲಿ ಪಾಲ್ಗೊಂಡರು.

Kinnigoli-12021301

Kinnigoli-12021302

Kinnigoli-12021303

Comments

comments

Leave a Reply

Read previous post:
ಎಸ್. ಕೋಡಿ ಸಂಗಮ ಮಹಿಳಾ ಮಂಡಲ ದಶಮಾನೋತ್ಸವ

ಕಿನ್ನಿಗೋಳಿ : ಮಹಿಳೆ ಕುಟುಂಬದ ಚೈತನ್ಯ ಶಕ್ತಿ, ಮಹಿಳೆಯರು ಸಮಾಜದ ಮುಂಚೂಣಿಗೆ ಬಂದರೆ ದೇಶ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಕಾಣುವುದು ಎಂದು ಕಟೀಲು ದೇವಳ ಅರ್ಚಕ...

Close