ಜೀವನ ನಡೆಸಲು ದೈವ ಮತ್ತು ದೇವರ ಆರಾದನೆ ಪೂರಕ

Bhagyavan Sanil
ಮೂಲ್ಕಿ:ಮಾನವ ಜೀವನದ ದುರಿತಗಳನ್ನು ದೂರಮಾಡಿ ಶಾಂತಿ ನೆಮ್ಮದಿ ಗಳಿಸಿ ಪ್ರಾಮಾಣಿಕ ಜೀವನ ನಡೆಸಲು ದೈವ ಮತ್ತು ದೇವರ ಆರಾದನೆ ಪೂರಕವಾಗಿದೆ ಎಂದು ಕೃಷ್ಣಾಪುರ ಮಠದ ಯತಿವರ್ಯರಾದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಪಂಜ ಕೊಕುಡೆ ಹರಿಪಾದೆ ಧರ್ಮದೈವ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಕ್ತಿಯಿಂದ ದ್ಯಾನಿಸಿ ಸತ್ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜೀವನದ ಉನ್ನತಿ ಗಳಿಸಲು ಸಾದ್ಯ ಎಂದರು.
ಈ ಸಂದರ್ಭ ನಲ್ಯ ಗುತ್ತು ಗುತ್ತಿನಾರ್ ಭೋಜ ಶೆಟ್ಟಿಯವರನ್ನು ಗ್ರಾಮಸ್ಥರ ಪರವಾಗಿ ಚಿನ್ನದ ಕೈಕಡಗ ತೊಡಿಸಿ ಸ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ವಹಿಸಿ ಶುಭ ಹಾರೈಸಿದರು. ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್ ಅಭಿನಂದನಾ ಭಾಷಣಗೈದರು. ನಲ್ಯಗುತ್ತು ಭುಜಂಗ ಶೆಟ್ಟಿ ಪ್ರಸ್ತಾವಿಸಿದರು.ಪಂಜ ಗುತ್ತು ವಿಶ್ವನಾಥ ಶೆಟ್ಟಿ, ಶಂಕರ ಶೆಟ್ಟಿ, ನಲ್ಯಗುತ್ತು ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಲ್ಯಗುತ್ತು ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಎಡ್ಮೆಮಾರ್ ನವೀನ್ ಶೆಟ್ಟಿ ನಿರೂಪಿಸಿದರು. ಉಮೇಶ್ ಪಂಜ ವಂದಿಸಿದರು.

Kinnigoli-13021301

Comments

comments

Leave a Reply

Read previous post:
ಜನಬೆಂಬಲ ಪಡೆಯುತ್ತಿರುವ ಮೂಲ್ಕಿ ತಾಲ್ಲೂಕು ಹೋರಾಟ

Narendra Kerekad ಮೂಲ್ಕಿ: ಮೂಲ್ಕಿ ತಾಲ್ಲೂಕಿಗಾಗಿ ಕಳೆದ 40 ವರ್ಷದಿಂದ ಧ್ವನಿಯಾಗಿರುವ ಮೂಲ್ಕಿ ತಾಲ್ಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿಯು ಸೋಮವಾರದಿಂದ ನಡೆಸುತ್ತಿರುವ ಸಾರ್ವಜನಿಕ ಧರಣಿಗೆ ಮೂಲ್ಕಿ...

Close