ಮೂಲ್ಕಿ ತಾಲ್ಲೂಕು ಹೋರಾಟ; ಅರೆ ಬೆತ್ತಲೆ ಪ್ರದರ್ಶನ

Narendra Kerekadu

ಮೂಲ್ಕಿ; ಅಭಿವೃದ್ದಿಯನ್ನು ಕಾಣುತ್ತಿರುವ ಮೂಲ್ಕಿಯನ್ನು ಕೀಳರಿಮೆಯಿಂದ ಕಾಣಬೇಡಿ, ನಮ್ಮ ಕೂಗು ಸರ್ಕಾರಕ್ಕೆ ಕೇಳಿಸದಿದ್ದರೆ ನೇರವಾಗಿ ವಿಧಾನ ಸಭೆಗೆ ಮುತ್ತಿಗೆ ಹಾಕಲು ತಯಾರಾಗಿದ್ದೇವೆ, ಪಕ್ಷಭೇಧ ಮರೆತು ಸಾರ್ವಜನಿಕರ ಹಿತಾಸಕ್ತಿಯಿಂದ ನಡೆಸುತ್ತಿರುವ ಸರಣಿ ಧರಣಿಗೆ ನ್ಯಾಯ ನೀಡಿ ಎಂದು ಹಿರಿಯ ರಾಜಕೀಯ ಧುರೀಣ ಎಂ.ಬಿ.ನೂರ್ ಮಹಮ್ಮದ್ ಹೇಳಿದರು.
ಮೂಲ್ಕಿಯಲ್ಲಿ ನಡೆಯುತ್ತಿರುವ ತಾಲ್ಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿಯ ಸಂಯೋಜನೆಯಲ್ಲಿನ ಸಾರ್ವಜನಿಕ ಧರಣಿ ಕಾರ್ಯಕ್ರಮದಲ್ಲಿ ಬುಧವಾರ ಮೂರನೇ ದಿನದಲ್ಲಿ ಸಮಿತಿಯ ಸದಸ್ಯರು ಹಾಗೂ ನಾಗರಿಕರು ಅರೆ ಬೆತ್ತಲೆ ಪ್ರದರ್ಶನ ನಡೆಸಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.
ಮೂಲ್ಕಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಎಂ.ಆಸಿಫ್ ಮಾತನಾಡಿ ಶಾಸಕ ಅಭಯಚಂದ್ರರು ವಿಧಾನಸಭೆಯಲ್ಲಿ ಮೂಲ್ಕಿ ಹೋರಾಟದ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾದ ಎಲ್ಲಾ ವರದಿಗಳ ಸಹಿತ ಮೂಲ್ಕಿ ತಾಲ್ಲೂಕು ಮತ್ತು ನ್ಯಾಯಾಲಯ ಸ್ಥಾಪನೆಗೆ ಮುಖ್ಯಮಂತ್ರಿಯವರಲ್ಲಿ ಮತ್ತೆ ಒತ್ತಾಯಿಸಿದ್ದು ಇದರ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆ ಇರುವುದರಿಂದ ಹೋರಾಟಕ್ಕೆ ಸೂಕ್ತ ಮನ್ನಣೆ ಸಿಕ್ಕಿದೆ, ಪ್ರಥಮವಾಗಿ ಮೂಲ್ಕಿಯಲ್ಲಿ ಇಂತಹ ಬೆಂಬಲಯುಕ್ತ ಹೋರಾಟ ನಡೆಸಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ಇದು ನಿಲ್ಲಬಾರದು ಎಂದು ಹೇಳಿದರು.
ಮೂಲ್ಕಿ ಹೋಬಳಿಯ ಎಲ್ಲಾ ಸಂಘ, ಸಂಸ್ಥೆಯ ಮಹಿಳಾ ಪ್ರಮುಖರು ಹಾಗೂ ಮಹಿಳಾ ಜನಪ್ರತಿನಿಧಿಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲವನ್ನು ನೀಡಿದರು. ಮೂಲ್ಕಿ ಪೇಟೆಯಲ್ಲಿ ಮಾತ್ರ ಮಧ್ಯಾಹ್ನದ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿ ಹೋರಾಟಕ್ಕೆ ಬೆಂಬಲಿಸಿದರು. ನಗರ ಸುತ್ತ ಸಾರ್ವಜನಿಕ ಮೆರವಣಿಗೆಯನ್ನು ನಡೆಸಲಾಯಿತು.
ಸಮಿತಿಯ ಹರಿಕೃಷ್ಣ ಪುನರೂರು, ಕೆ.ಭುವನಾಭಿರಾಮ ಉಡುಪ, ದಿನೇಶ್ ಶೆಟ್ಟಿ ಉಳ್ಳೆಪಾಡಿ, ಹರೀಶ್ ಪುತ್ರನ್, ಗುಣಪಾಲ ಶೆಟ್ಟಿ, ಆಶಾ ಸುವರ್ಣ, ವನಿತಾ ಉದಯ ಅಮಿನ್, ಯೊಗೀಶ್ ಕೋಟ್ಯಾನ್, ಪುತ್ತುಬಾವ, ಸತೀಶ್ ಅಂಚನ್, ಸುನಿಲ್ ಆಳ್ವಾ, ದೇವಪ್ರಸಾದ ಪುನರೂರು, ನಾಗರಾಜ್, ಮನ್ಸೂರ್, ಅರ್ಜುನ್, ರಾಜಾ ಪತ್ರಾವೋ, ಉದಯ ಶೆಟ್ಟಿ ಶಿಮಂತೂರು, ವಂದನಾ ಕಾಮತ್, ಚಿತ್ರಾ ಶೆಟ್ಟಿ, ಸರೋಜಿನಿ ಸುವರ್ಣ, ರಕ್ಷಿತಾ ಯೋಗೀಶ್ ಕೊಟ್ಯಾನ್, ಕಾಂಗ್ರೇಸ್ಸಿನ ಜೊಸ್ಸಿ ಪಿಂಟೋ, ಶಶಿಕಾಂತ ಶೆಟ್ಟಿ, ಅಬ್ದುಲ್ ರಜಾಕ್, ತಿಮ್ಮಪ್ಪ ಕೋಟ್ಯಾನ್, ಶಾಲೆಟ್ ಪಿಂಟೋ, ಗೋಪಿನಾಥ ಪಡಂಗ, ವಸಂತ ಬೆರ್ನಾರ್ಡ್, ಸತೀಶ್ ಕಾಮತ್, ಉಮೇಶ್ ಮಾನಂಪಾಡಿ, ಉದಯ ಅಮಿನ್ ಮಟ್ಟು, ಯದೀಶ್ ಅಮಿನ್ ಕೊಕ್ಕರ್‌ಕಲ್ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡರು.

Kinnigoli14021302

Kinnigoli14021303

 

Comments

comments

Leave a Reply

Read previous post:
ಗ್ರೀನ್‌ವೇ ಒಲೆ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ವಲಯ ಬಳ್ಕುಂಜೆ ಕಾರ್ಯಕ್ಷೇತ್ರದಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಂತಾಬಾರೆ ಬೂದಬಾರೆ ಸ್ವ ಸಹಾಯ ಸಂಘದ ಕಾರ್ಯದರ್ಶಿಯಾದ ಗಣೇಶ್ ಕೊಲ್ಲೂರು ಇವರಿಗೆ ವಿಜಯ ಇಂಡಸ್ಟ್ರಿಯವರು...

Close