ಏಳಿಂಜೆ ಯುವಕ ಮಂಡಲದ 26ನೇ ವಾರ್ಷಿಕೋತ್ಸವ

Raghunath Kamath

ಕಿನ್ನಿಗೋಳಿ:  ಏಳಿಂಜೆ ನವಚೇತನ ಯುವಕ ಮಂಡಲದ 26ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾಪುರಸ್ಕಾರ ಇತ್ತೀಚಿಕೆ ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ನಡೆಯಿತು. ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಹಿರಿಯ ಸಾಧಕರಾದ ಎತ್ತಿನ ಗಾಡಿ ಚಾಲಕ ಇಜಿದೋರ್ ಸಲ್ದಾನಾ, ಕೃಷಿಕ ಜಯರಾಮ ಶೆಟ್ಟಿ, ಸಮಾಜ ಸೇವಕ ವೈ.ಕೃಷ್ಣ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ದಿ| ಅಕ್ಕಿ ಶಂಕು ಶೆಟ್ಟಿ ಸ್ಮರಣಾರ್ಥವಾಗಿ ಕಲಿಕೆಯಲ್ಲಿ ಪ್ರತಿಭೆಯುಳ್ಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ತುಳು ವಿದ್ವಾಂಸ ದಯಾನಂದ್ ಕತ್ತಲ್‌ಸಾರ್, ಐಕಳ ಗ್ರಾ.ಪಂ. ಅಧ್ಯಕ್ಷೆ ಪದ್ಮಿನಿ ವಸಂತ್, ಗೌರವಾಧ್ಯಕ್ಷ ಅನಿಲ್ ಶೆಟ್ಟಿ ಕೋಂಜಾಲುಗುತ್ತು, ಅಧ್ಯಕ್ಷ ವೈ. ಕೃಷ್ಣ ಮೂಲ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಸಾದ್ ಕೋಟ್ಯಾನ್ ವರದಿ ವಾಚಿಸಿದರು, ಲಕ್ಷ್ಮಣ್ ಬಿ. ಸ್ವಾಗತಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸುಧಾಕರ ಸಾಲ್ಯಾನ್ ವಂದಿಸಿದರು.

Kinnigoli15021301

Comments

comments

Leave a Reply

Read previous post:
ಮೂಲ್ಕಿ ತಾಲ್ಲೂಕು ಹೋರಾಟ; ಅರೆ ಬೆತ್ತಲೆ ಪ್ರದರ್ಶನ

Narendra Kerekadu ಮೂಲ್ಕಿ; ಅಭಿವೃದ್ದಿಯನ್ನು ಕಾಣುತ್ತಿರುವ ಮೂಲ್ಕಿಯನ್ನು ಕೀಳರಿಮೆಯಿಂದ ಕಾಣಬೇಡಿ, ನಮ್ಮ ಕೂಗು ಸರ್ಕಾರಕ್ಕೆ ಕೇಳಿಸದಿದ್ದರೆ ನೇರವಾಗಿ ವಿಧಾನ ಸಭೆಗೆ ಮುತ್ತಿಗೆ ಹಾಕಲು ತಯಾರಾಗಿದ್ದೇವೆ, ಪಕ್ಷಭೇಧ ಮರೆತು...

Close